ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್: ಉಗ್ರರ ದಾಳಿ-ಮೆಡಿಕಲ್ ತಂಡದ ಆರು ಮಂದಿ ಬಲಿ (Americans | Afghanistan | Kabul | medical team | German,)
Bookmark and Share Feedback Print
 
ಕಣ್ಣು ಬೇನೆ ಮತ್ತು ಆರೋಗ್ಯ ತಪಾಸಣೆ ನಡೆಸಿ ವಾಪಸಾಗುತ್ತಿದ್ದ ಹತ್ತು ಮಂದಿ ಮೆಡಿಕಲ್ ತಂಡದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಆರು ಮಂದಿ ಅಮೆರಿಕನ್‌ರು ಸಾವನ್ನಪ್ಪಿರುವ ಘಟನೆ ಶನಿವಾರ ಉತ್ತರ ಅಫ್ಘಾನಿಸ್ತಾನದ ಹಳ್ಳಿಯಲ್ಲಿ ನಡೆದಿದೆ.

ಮೆಡಿಕಲ್ ತಂಡದಲ್ಲಿ ಆರು ಮಂದಿ ಅಮೆರಿಕನ್, ಒಬ್ಬ ಜರ್ಮನ್, ಒಬ್ಬ ಬ್ರಿಟನ್, ಇಬ್ಬರು ಅಫ್ಘಾನಿಸ್ತಾನಿಯರು ಇದ್ದಿರುವುದಾಗಿ ಇಂಟರ್‌ನ್ಯಾಷನಲ್ ಅಸಿಸ್ಟೆನ್ಸ್ ಮಿಷನ್‌ನ ನಿರ್ದೇಶಕ ಡಿರ್‌ಕ್ ಫ್ರಾನ್ಸ್ ತಿಳಿಸಿದ್ದಾರೆ. ಹತ್ತು ಮಂದಿಯ ತಂಡ ನ್ಯೂರಿಸ್ತಾನ್ ಪ್ರಾಂತ್ಯದಲ್ಲಿ ಚಿಕಿತ್ಸೆ ನೀಡಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಈ ಗುಂಡಿನ ದಾಳಿ ನಡೆದಿದೆ.

'ಅವರೆಲ್ಲ ಅಮೆರಿಕದ ಪರ ಗೂಢಚಾರಿಕೆ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲ, ಕ್ರಿಶ್ಚಿಯನ್ ಧರ್ಮ ಬೋಧನೆ ಮಾಡುತ್ತಿರುವುದಾಗಿ ತಾಲಿಬಾನ್ ವಕ್ತಾರ ಜಾಬಿಯುಲ್ಲಾ ಮುಜಾಹಿದ್ ಮಾಧ್ಯಮಕ್ಕೆ ತಿಳಿಸಿದ್ದು, ಆ ಕಾರಣಕ್ಕಾಗಿ ಅವರನ್ನು ಹತ್ಯೆಗೈದಿರುವುದಾಗಿ ಹೇಳಿದ್ದಾನೆ.

ಈ ಘಟನೆಯಿಂದಾಗಿ ನಾವು ನೀಡುತ್ತಿರುವ ಸೇವೆಯ ಮೇಲೆ ಪರಿಣಾಮ ಬೀರುವಂತಾಗಿದೆ. 1966ರಿಂದ ಐಎಎಂ ಆರೋಗ್ಯ ಸೇವೆ ನೀಡುವ ಕಾರ್ಯದಲ್ಲಿ ತೊಡಗಿದೆ ಎಂದು ಫ್ರಾನ್ಸ್ ವಿವರಿಸಿದ್ದಾರೆ.

ಉಗ್ರರು ಎಷ್ಟೇ ಅಟ್ಟಹಾಸಗೈಯಲಿ ಅಫ್ಘಾನಿಸ್ತಾನದಲ್ಲಿರುವ ಲಕ್ಷಾಂತರ ಜನರಿಗೆ ದೊರೆಯುವ ಆರೋಗ್ಯ ಸೇವೆಯನ್ನು ನೀಡುವುದನ್ನು ತಡೆಯಲು ಅವರಿಂದ ಸಾಧ್ಯವಿಲ್ಲ ಎಂದು ದತ್ತಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ