ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನ್ಯೂಯಾರ್ಕ್: ಅಜ್ಜಿಯ ಕೋಪ-80 ವರ್ಷದ ಪತಿಯ ಹತ್ಯೆ! (New York | New Jersey | husband | Woman kills)
Bookmark and Share Feedback Print
 
80ರ ಹರೆಯದ ಪತಿರಾಯನ ವಿರುದ್ಧ ಆಕ್ರೋಶಗೊಂಡ 75 ವರ್ಷದ ಪತ್ನಿ ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ನ್ಯೂಜೆರ್ಸಿಯ ಮೋನ್‌ರೊಯೆ ಎಂಬಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪತಿ ನಿವೃತ್ತ ದಂತವೈದ್ಯ ಹಾರ್ವೆ ಜುಕೆರ್ (80) ಅವರನ್ನು ಸಿಟ್ಟಿನಿಂದ ಪತ್ನಿ ರುಥ್ ಜುಕೆರ್ (75) ಮೋನ್‌ರೂಯೆ ನಿವೃತ್ತ ಸಮುದಾಯ ವಾಸವಾಗಿರುವ ಮನೆಯಲ್ಲಿ ಹತ್ಯೆಗೈದಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಹೇಳಿದೆ.

ಕೆರಳಿ ಕೆಂಡವಾಗಿದ್ದ ಅಜ್ಜಿ ಅಜ್ಜನಿಗೆ ಚೂರಿಯಿಂದ ಸಾಕಷ್ಟು ಬಾರಿ ತಿವಿದಿದ್ದು, ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಮಗ ಸ್ಕಾಟ್(46) ಮನೆಗೆ ಬಂದಾಗ ವಿಷಯ ಬೆಳಕಿಗೆ ಬಂದಿತ್ತು. ಸ್ಥಳದಲ್ಲಿದ್ದ ಚೂರಿ ಮತ್ತು ಪತ್ನಿಯನ್ನು ನಂತರ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪ್ರಾಸಿಕ್ಯೂಟರ್ ಇಲಾಖೆ ತಿಳಿಸಿದೆ.

ಪತ್ನಿಯಿಂದ ಹಾರ್ವೆ ಹೆಚ್ಚು ಒತ್ತಡಕ್ಕೊಳಗಾಗಿದ್ದು, ಅವರು ಹಲವಾರು ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ. ಆದರೆ ಪತಿಯನ್ನು ಕೊಂದಿರುವ ಘಟನೆ ಬಗ್ಗೆ ತಾನು ದೋಷಿ ಅಲ್ಲ ಎಂದು ಅಜ್ಜಿ ವಾದಿಸುತ್ತಿದ್ದಾರಂತೆ. ಹಾಗಾಗಿ ಆಕೆಯನ್ನು ಮಾನಸಿಕ ಪರೀಕ್ಷೆಗೆ ಒಳಪಡಿಸುವಂತೆ ಆದೇಶಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ