ಚೀನಾದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂಭವಿಸಿದ ಭೂ ಕುಸಿತದಿಂದಾಗಿ ಕನಿಷ್ಠ 80 ಮಂದಿ ಬಲಿಯಾಗಿದ್ದು, 2,000ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ ಉತ್ತರ ಪಶ್ಚಿಮ ಗಾನ್‌ಸೂ ಪ್ರಾಂತ್ಯದಲ್ಲಿ ಕುಂಭದ್ರೋಣ ಮಳೆಯಾಗುತ್ತಿದ್ದು, ಭಾನುವಾರ ಭೂಕುಸಿತ ಉಂಟಾಗಿದೆ ಎಂದು ವರದಿಯಾಗಿದೆ.
ಶನಿವಾರ ರಾತ್ರಿ ಗಂಟೆ 10ರಿಂದ ಧಾರಾಕಾರ ಮಳೆ ಮುಂದುವರಿದಿದ್ದು, ಇದರ ಪರಿಣಾಮ ಮಣ್ಣು ಕುಸಿತ ಸಂಭವಿಸಿದೆ ಎಂದು ಜಿನ್ವಾ ಪತ್ರಿಕೆ ವರದಿ ಮಾಡಿವೆ.
ಭಾರೀ ಮಳೆಯಿಂದಾಗಿ ಇದೀಗ ಪ್ರವಾಹದ ಸ್ಥಿತಿಯುಂಟಾಗುತ್ತಿದ್ದು, ಸುತ್ತುಮುತ್ತಲಿನ 50 ಸಾವಿರ ನಿವಾಸಿಗಳಿಗೂ ಪ್ರವಾಹ ತೊಂದರೆಯ ಭೀತಿ ಹುಟ್ಟತೊಡಗಿದೆ.