ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಟೆರರ್ ಸಂಪರ್ಕ: ಇಂಡೋನೇಷ್ಯಾ ಧರ್ಮ ಬೋಧಕ ಬಶೀರ್ ಸೆರೆ (Indonesian | cleric Bashir | terror group | Jemaah Islamiyah,)
Bookmark and Share Feedback Print
 
ಆಗ್ನೇಯ ಏಷ್ಯಾದ ಭಯೋತ್ಪಾದಕ ಸಂಘಟನೆಯಾದ ಜೆಮಾ ಇಸ್ಲಾಮಿಯಾಕ್ಕೆ ಬೆಂಬಲ ನೀಡಿರುವ ಆರೋಪದ ಮೇಲೆ ಇಸ್ಲಾಮಿಕ್ ತೀವ್ರಗಾಮಿ ಧಾರ್ಮಿಕ ಬೋಧಕರೊಬ್ಬರನ್ನು ಇಂಡೋನೇಷ್ಯಾ ಪೊಲೀಸರು ಬಂಧಿಸಿರುವುದಾಗಿ ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ಲಾಮಿಕ ಭಯೋತ್ಪಾದಕ ಸಂಘಟನೆ ಜತೆ ಶಾಮೀಲಾಗಿರುವ ಮೌಲ್ವಿ ಅಬು ಬಾಕಾರ್ ಬಶೀರ್ ಅವರನ್ನು ಸೆರೆ ಹಿಡಿದಿರುವುದಾಗಿ ಉಗ್ರ ನಿಗ್ರಹದ ವರಿಷ್ಠ ಅನ್ಸಾಯಾದ್ ಮಬೈ ಹೇಳಿದ್ದಾರೆ.

ಏಕ್ ಪ್ರಾಂತ್ಯದಲ್ಲಿನ ಭಯೋತ್ಪಾದಕ ಜಾಲದೊಂದಿಗೆ ಬಶೀರ್ ಶಾಮೀಲಾಗಿರುವುದು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಏಕ್ ಉಗ್ರಗಾಮಿ ಗುಂಪು ಜೆಮಾ ಇಸ್ಲಾಮಿಯಾ ಮತ್ತು ಇನ್ನಿತರ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿದೆ ಎಂದು ಅವರು ವಿವರಿಸಿದ್ದಾರೆ.

ಬಶೀರ್ ಏಕ್ ಭಯೋತ್ಪಾದಕ ಸಂಘಟನೆಯಲ್ಲಿನ ತರಬೇತಿಗಾಗಿ ಆರ್ಥಿಕ ನೆರವು ನೀಡುತ್ತಿರುವ ಆರೋಪ ಇದ್ದು, ಇನ್ನಿತರ ಹಲವು ಆರೋಪಗಳು ಬಶೀರ್ ಮೇಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ಬಶೀರ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ