ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಪ್ರವಾಹದ ಆಪತ್ತು: ಆರ್ಮಿ ಹೆಲಿಕಾಪ್ಟರ್‌ನಲ್ಲಿ ಮಗುವಿಗೆ ಜನ್ಮ (Helicopter | Pakistan | army | Woman gives birth | Zahida Parveen)
Bookmark and Share Feedback Print
 
ಧಾರಾಕಾರ ವರ್ಷಧಾರೆ ಮತ್ತು ಪ್ರವಾಹಕ್ಕೆ ಪಾಕ್ ತತ್ತರಿಸಿಹೋಗಿದ್ದು ಜನ ಸುರಕ್ಷಿತ ಸ್ಥಳಕ್ಕೆ ಹೋಗಲು ಪರದಾಡುತ್ತಿದ್ದಾರೆ. ಏತನ್ಮಧ್ಯೆಯೇ ಪಂಜಾಬ್ ಪ್ರಾಂತ್ಯದ ಪ್ರವಾಹ ಪೀಡಿತ ಪ್ರದೇಶದಿಂದ ಮಹಿಳೆಯೊಬ್ಬಳನ್ನು ರಕ್ಷಿಸಿ ಆರ್ಮಿ ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಬರುತ್ತಿರುವ ಸಂದರ್ಭದಲ್ಲಿಯೇ ಮಗುವೊಂದಕ್ಕೆ ಜನ್ಮ ನೀಡಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಕ್ಕೇರಿ ಹರಿಯುತ್ತಿರುವ ಪ್ರವಾಹದ ನಡುವೆ ಮೊಹಮ್ಮದ್ ಜಾವೇದ್ ಮತ್ತು ಆತನ ಗರ್ಭಿಣಿ ಪತ್ನಿ ಜಾಹಿದಾ ಪರ್ವಿನ್ ಸಿಕ್ಕಿಬಿದ್ದಿರುವುದಾಗಿ ಆರ್ಮಿ ರಕ್ಷಮಾ ತಂಡಕ್ಕೆ ಸೋಮವಾರ ಸುದ್ದಿ ಮುಟ್ಟಿಸಿದ್ದರು. ಕೂಡಲೇ ಆ ಪ್ರಾಂತ್ಯಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಿದ ಆರ್ಮಿ ತಂಡ ಜಾವೇದ್ ಮತ್ತು ಆತನ ಪತ್ನಿಯನ್ನು ರಕ್ಷಿಸಿ ಕರೆದೊಯ್ಯುತ್ತಿರುವ ಸಂದರ್ಭದಲ್ಲಿಯೇ ಮಗುವೊಂದಕ್ಕೆ ಜನ್ಮ ನೀಡಿದ್ದಳು.

ನಂತರ ಪರ್ವಿನ್‌ಳನ್ನು ಮುಲ್ತಾನ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಗೆ ಎಲ್ಲಾ ರೀತಿ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು ಎಂದು ಅಧಿಕಾರಿಗಳು ವಿವರಿಸಿದರು.

ಮತ್ತೊಂದು ಘಟನೆಯಲ್ಲಿ ಪಾಕಿಸ್ತಾನ ಆರ್ಮಿ ತಂಡ ಸೋಮವಾರ ಸೋನಾವಾ ಗ್ರಾಮದಲ್ಲಿನ ಮಹಿಳೆಯೊಬ್ಬರನ್ನು ರಕ್ಷಿಸಿದ್ದು, ಈ ಸಂದರ್ಭದಲ್ಲಿ ಆಕೆಯೂ ಕೂಡ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಆಕೆಯ ಸ್ಥಿತಿ ತುಂಬಾ ಗಂಭೀರವಾಗಿದೆ.ಇದೀಗ ತಾಯಿ ಮತ್ತು ಅವಳಿ ಮಗುವನ್ನು ಕೂಡ ಮುಲ್ತಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾಕಿಸ್ತಾನದಲ್ಲಿ ಕಳೆದ 80 ವರ್ಷಗಳಲ್ಲಿಯೇ ಕಂಡರಿಯದ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಆರ್ಮಿ ಹೆಲಿಕಾಪ್ಟರ್ ತಂಡ ಈಗಾಗಲೇ ಪ್ರವಾಹ ಪೀಡಿತ ಪಂಜಾಬ್, ಸಿಂಧ್, ಖೈಬೆರ್ ಪ್ರಾಂತ್ಯಗಳಲ್ಲಿನ ನೂರಾರು ಜನರನ್ನು ರಕ್ಷಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ