ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಂಚ ಪಡೆದ ಭಾರತ ಮೂಲದ ಅಮೆರಿಕನ್‌ಗೆ ಜೈಲು (Indian-American CEO | Sushil Bansal | Columbia | Bribe)
Bookmark and Share Feedback Print
 
ಭಾರತೀಯ ಮೂಲದ ಅಮೆರಿಕಾ ಪ್ರಜೆಯೊಬ್ಬ ಲಂಚ ಪಡೆದಿದ್ದ ಕಾರಣಕ್ಕಾಗಿ 20 ತಿಂಗಳ ಜೈಲು ಶಿಕ್ಷೆಗೊಳಗಾಗಿದ್ದಾನೆ. ಭ್ರಷ್ಟಾಚಾರ ನಡೆಸಿದ್ದ ಕಾರಣಕ್ಕಾಗಿ ಐಟಿ ಕಂಪನಿಯೊಂದರಲ್ಲಿ ಸಿಇಒ ಆಗಿದ್ದ ಈತನಿಗೆ ಶಿಕ್ಷೆಯಷ್ಟೇ ಅಲ್ಲದೆ, 800,000 ಅಮೆರಿಕನ್ ಡಾಲರ್ ಹಣವನ್ನು ವಾಪಸ್ ಮಾಡುವಂತೆಯೂ ಆದೇಶ ನೀಡಲಾಗಿದೆ.

'ಅಡ್ವಾನ್ಸ್‌ಡ್ ಇಂಟೆಗ್ರೆಟೆಡ್ ಟೆಕ್ನಾಲಜಿ ಕಾರ್ಪೊರೇಷನ್' ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷ ಹಾಗೂ ಸಿಇಒ ಸುಶೀ ಭನ್ಸಾಲ್ ಎಂಬಾತನೇ ತಪ್ಪಿತಸ್ಥ. ಈತ 20 ತಿಂಗಳು ಜೈಲು ಶಿಕ್ಷೆ ಅನುಭವಿಸಿದ ನಂತರ ಮೂರು ವರ್ಷಗಳ ಕಾಲ ಕಟ್ಟೆಚ್ಚರ ಪಟ್ಟಿಯಲ್ಲಿರುತ್ತಾನೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

ಜೈಲು ಶಿಕ್ಷೆಯ ಜತೆಗೆ ಭನ್ಸಾಲ್ ಮತ್ತು ಆತನ ಕಂಪನಿಯು 844,765 ಅಮೆರಿಕನ್ ಡಾಲರ್ ಮೊತ್ತವನ್ನು ನಷ್ಟ ಅನುಭವಿಸಿರುವ ಕೊಲಂಬಿಯಾ ಸರಕಾರಕ್ಕೆ ನೀಡಬೇಕು ಎಂದು ಅಮೆರಿಕಾ ಅಟಾರ್ನಿ ರೊನಾಲ್ಡ್ ಮೇಕನ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಅಧಿಕಾರಿಗಳಿಂದ ಲಂಚ ಪಡೆದಿದ್ದ ಆರೋಪದಲ್ಲಿ ವರ್ಜೀನಿಯಾ ನಿವಾಸಿ ಭನ್ಸಾಲ್ ಮತ್ತು ಆತನ ಎಐಟಿಸಿ ಕಂಪನಿಯು ದೋಷಿಯೆಂದು 2010ರ ಏಪ್ರಿಲ್ 27ರಂದು ತೀರ್ಪು ನೀಡಲಾಗಿತ್ತು.

2005ರ ಸೆಪ್ಟೆಂಬರ್ ತಿಂಗಳಿಂದ 2009ರ ಮಾರ್ಚ್ ತಿಂಗಳ ನಡುವೆ ತಾನು ಮತ್ತು ತನ್ನ ಕಂಪನಿಯು 700,000 ಡಾಲರ್ ಮೊತ್ತವನ್ನು ಕೊಲಂಬಿಯಾ ಜಿಲ್ಲಾ ಕಚೇರಿಯ ಆಗಿನ ಸಿಬ್ಬಂದಿಗಳಾದ ಯೂಸುಫ್ ಅಕಾರ್ ಮತ್ತು ಫಾರುಕ್ ಅವಾನ್ ಅವರಿಗೆ ನೀಡಿರುವುದಾಗಿ ಭನ್ಸಾಲ್ ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದ.

ಅಕಾರ್ ಮತ್ತು ಅವಾನ್ ಅವರು ಕೂಡ ಈ ಹಿಂದೆಯೇ ತಪ್ಪೊಪ್ಪಿಗೆ ನೀಡಿದ್ದು, ಅವರ ವಿರುದ್ಧದ ಶಿಕ್ಷೆ ಆಗಸ್ಟ್ 12ರಂದು ಪ್ರಕಟವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ