ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಕ್ಷಣಾ ಮಾಹಿತಿ ಮಾರಿದ ಭಾರತೀಯನಿಗೆ ಜೀವಾವಧಿ (Indian-American | selling defence info | China | Noshir S Gowadia)
Bookmark and Share Feedback Print
 
ಭಾರತ ಮೂಲದ ಅಮೆರಿಕಾ ಪ್ರಜೆ, ಬಿ-52 ರಹಸ್ಯ ಬಾಂಬ್ ಇಂಜಿನಿಯರ್ ನಾಸಿರ್ ಎಸ್. ಗೊವಾಡಿಯಾ ಎಂಬಾತ ಸೂಕ್ಷ್ಮ ಕ್ಷಿಪಣಿ ತಂತ್ರಜ್ಞಾನ ಮತ್ತು ಇತರ ರಹಸ್ಯ ಮಾಹಿತಿಗಳನ್ನು ಚೀನಾಕ್ಕೆ ಮಾರಾಟ ಮಾಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಭೀತಿಯಲ್ಲಿದ್ದಾನೆ.

ಗೊವಾಡಿಯಾ ಶಿಕ್ಷೆ ಪ್ರಮಾಣವನ್ನು 2010ರ ನವೆಂಬರ್ 22ರಂದು ಪ್ರಕಟಿಸಲಾಗುತ್ತದೆ.

ಗೊವಾಡಿಯಾ ಅವರು ನಮ್ಮ ದೇಶದ ಅತಿ ಸೂಕ್ಷ್ಮ ಶಸ್ತ್ರಾಸ್ತ್ರ ಸಂಬಂಧಿ ವಿನ್ಯಾಸಗಳನ್ನು ಹಣಕ್ಕಾಗಿ ಚೀನಾ ಸರಕಾರಕ್ಕೆ ಒದಗಿಸಿದ್ದಾರೆ. ಇಂದು ಈ ಸಂಬಂಧ ಸಾಕಷ್ಟು ಆಧಾರಗಳು ಸಿಕ್ಕಿರುವುದು ರುಜುವಾತಾಗಿದೆ ಎಂದು ರಾಷ್ಟ್ರೀಯ ಭದ್ರತೆಯ ಸಹಾಯಕ ಅಟಾರ್ನಿ ಜನರಲ್ ಡೇವಿಡ್ ಕ್ರಿಸ್ ತಿಳಿಸಿದ್ದಾರೆ.

ಆರೋಪ ರುಜುವಾತಾಗಿರುವುದರಿಂದ 66ರ ಹರೆಯದ ಗೋವಾಡಿಯಾ ಜೀವಾವಧಿ ಶಿಕ್ಷೆ ಭೀತಿಯಲ್ಲಿದ್ದಾರೆ. ಚೀನಾಕ್ಕೆ ರಹಸ್ಯ ಮಾಹಿತಿಗಳನ್ನು ಪೂರೈಸಿದ ಐದು ಕ್ರಿಮಿನಲ್ ಆಪಾದನೆಗಳು ಗೋವಾಡಿಯಾ ಅವರು ದೋಷಿಯೆಂದು ಹೇಳಿವೆ.

2005ರಲ್ಲಿ ಗೋವಾಡಿಯಾ ಅವರನ್ನು ಮೊದಲು ಬಂಧಿಸಲಾಗಿತ್ತು. ಉದ್ದೇಶಪೂರ್ವಕವಾಗಿ ಅವರು ರಾಷ್ಟ್ರಕ್ಕೆ ಸಂಬಂಧಪಟ್ಟ ರಹಸ್ಯ ಮಾಹಿತಿಗಳನ್ನು ಸಂಬಂಧಪಡದೇ ಇರುವ ವ್ಯಕ್ತಿಯೊಬ್ಬರಿಗೆ ಹಸ್ತಾಂತರಿಸಿದ ಆರೋಪವನ್ನು ಹೊರಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ