ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಾಲಿನ ಪುಡಿಯಿಂದ ಮಕ್ಕಳಲ್ಲಿ ಅಕಾಲಿಕ ಲೈಂಗಿಕ ಬೆಳವಣಿಗೆ (China | milk powder | infant girls breast growing | Syrutra)
Bookmark and Share Feedback Print
 
ಚೀನಾದಲ್ಲಿ ಹಾಲು ಕುಡಿದ ಹಸುಗೂಸುಗಳ ಲೈಂಗಿಕ ಅವಯವಗಳಲ್ಲಿ ಇದ್ದಕ್ಕಿದ್ದಂತೆ ಬೆಳವಣಿಗೆಯಾಗಿವೆ. ಇದರ ಹಿಂದಿರುವ ಕಾರಣ ಹಾಲಿನ ಪುಡಿ. ಪುಟ್ಟ ಮಕ್ಕಳಿಗೆ ಹೊರಗಿನ ಆಹಾರವನ್ನು ನೀಡಿದರೆ ಏನೆಲ್ಲಾ ಆವಾಂತರಗಳು ಸೃಷ್ಟಿಯಾಗಬಹುದು ಎಂಬುದಕ್ಕಿದು ಭೀಕರ ಪರಿಣಾಮದ ಸಣ್ಣ ಉದಾಹರಣೆ.

ನಮ್ಮ ಪಕ್ಕದ ರಾಷ್ಟ್ರದ ಹುಬೈ ಪ್ರಾಂತ್ಯದಲ್ಲಿ ನಡೆದಿರುವ ಘಟನೆಯಿದು. ಹತ್ತಾರು ಪುಟ್ಟ ಹೆಣ್ಣು ಮಕ್ಕಳ ಎದೆಯಲ್ಲಿ ಅಚಾನಕ್ ಬೆಳವಣಿಗಳು ಕಂಡು ಬಂದಿರುವುದರಿಂದ ಆಸ್ಪತ್ರೆಗಳಿಗೆ ದಾಖಲಾಗುವ ಪ್ರಮಾಣ ಹೆಚ್ಚಾಗಿತ್ತು. ಮೇಲ್ನೋಟಕ್ಕೆ ಇದು ಹಾಲಿನ ಪುಡಿಯಿಂದ ಉಂಟಾದ ದುಷ್ಪರಿಣಾಮ ಎಂಬುದು ತಿಳಿದು ಬಂದಿದೆ. ಹೆಚ್ಚಿನ ತನಿಖೆಗಳಿಗೆ ಸರಕಾರ ಆದೇಶ ನೀಡಿದೆ.
ಹಾಲಿನ ಪುಡಿಯಿಂದ ಸಮಸ್ಯೆಗೊಳಗಾದ 13 ತಿಂಗಳ ಕೂಸು.
PR

ಪೂರ್ವ ಚೀನಾದ ಶಾಂದಾಂಗ್ ಪ್ರಾಂತ್ಯದಲ್ಲಿನ ಕ್ವಿಂಗ್ದಾವೋ ಕರಾವಳಿ ನಗರದಲ್ಲಿ 1998ರಲ್ಲಿ ಸ್ಥಾಪನೆಯಾಗಿರುವ 'ಸಿರೂತ್ರಾ' ಎಂಬ ಕ್ಷೀರೋತ್ಪನ್ನ ಸಂಸ್ಥೆಯಿಂದ ಈ ಹಾಲಿನ ಪುಡಿ ತಯಾರಾಗಿದ್ದು, ಅದರ ಮಾದರಿಗಳನ್ನು ತನಿಖೆಗೊಳಪಡಿಸುವಂತೆ ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ ಆದೇಶ ನೀಡಿರುವುದಾಗಿ ಚೀನಾ ಆರೋಗ್ಯ ಸಚಿವಾಲಯದ ವಕ್ತಾರ ಡೆಂಗ್ ಹೈಹುವಾ ತಿಳಿಸಿದ್ದಾರೆ.

ತಮ್ಮ ಹೆಣ್ಣು ಮಕ್ಕಳ ಎದೆ ಅಕಾಲಿಕವಾಗಿ ಬೆಳೆದಿದೆ ಎಂದು ಇದೇ ತಿಂಗಳ ಆರಂಭದಲ್ಲಿ ಹುಬೈ ಪ್ರಾಂತ್ಯದ ಕನಿಷ್ಠ ಮೂರು ಮಕ್ಕಳ ಹೆತ್ತವರು ದೂರು ನೀಡಿದ್ದು, ಅವರ ಮತ್ತು ವೈದ್ಯರ ಪ್ರಕಾರ ಇದಕ್ಕೆ ಕಾರಣವಾಗಿರುವುದು ಹಾಲಿನ ಪುಡಿ.

ಇದೀಗ ಅಧಿಕೃತವಾಗಿ ದೂರು ದಾಖಲಾಗಿರುವ ನಾಲ್ಕರಿಂದ 15 ತಿಂಗಳುಗಳ ವಯಸ್ಸಿನ ಮೂರು ಹೆಣ್ಣು ಮಕ್ಕಳನ್ನು ಪರಿಶೀಲನೆ ನಡೆಸಿದಾಗ, ಅವರದೇ ವಯಸ್ಸಿನ ಇತರ ಹೆಣ್ಣು ಮಕ್ಕಳು ಮತ್ತು ವಯಸ್ಕ ಮಹಿಳೆಯಲ್ಲಿರುವ ಹಾರ್ಮೋನ್ ಪ್ರಮಾಣಕ್ಕಿಂತ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ವೈದ್ಯಕೀಯ ವರದಿಗಳು ಹೇಳಿವೆ.

ಕೇವಲ ಹಾಲಿನ ಪುಡಿಯಿಂದಾಗಿಯೆ ಮಕ್ಕಳಲ್ಲಿ ಅಕಾಲಿಕ ಲೈಂಗಿಕ ಬೆಳವಣಿಗೆಗಳು ನಡೆದಿವೆ ಎಂಬುದನ್ನು ಸರಕಾರ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಮಕ್ಕಳಲ್ಲಿನ ಈ ಅಪಕ್ವ ಬೆಳವಣಿಗೆಗಳ ಹಿಂದೆ ವಿಸ್ತೃತ ಅಂಶಗಳಿರಬಹುದು. ಅದು ಆಹಾರ ಅಥವಾ ಪಾರಿಸರಿಕ ಅಂಶಗಳು ಕಾರಣವಾಗಿರುವ ಸಾಧ್ಯತೆಗಳೂ ಇವೆ. ಹಾಗಾಗಿ ಈಗ ನಾವು ಎಲ್ಲಾ ರೀತಿಯ ತನಿಖೆಗಳನ್ನೂ ನಡೆಸುತ್ತಿದ್ದೇವೆ ಎಂದು ಸರಕಾರ ತಿಳಿಸಿದೆ.

ಆರೋಪಗಳು ಕೇಳಿ ಬರುತ್ತಿದ್ದಂತೆ ಅಮೆರಿಕಾ ಶೇರು ಮಾರುಕಟ್ಟೆ ನಾಸ್ದಾಕ್‌ನಲ್ಲಿ ಸ್ಥಾನ ಪಡೆದಿರುವ 'ಸಿರೂತ್ರಾ' ಕಂಪನಿಯು ಸ್ಪಷ್ಟನೆ ನೀಡಿದೆ. ತಾನು ಯಾವತ್ತೂ ಮಾನವ ನಿರ್ಮಿತ ಹಾರ್ಮೋನುಗಳು ಅಥವಾ ಇನ್ನಿತರ ಯಾವುದೇ ಅಕ್ರಮ ದ್ರವ್ಯಗಳನ್ನು ಕ್ಷೀರೋತ್ಪನ್ನಗಳಿಗೆ ಸೇರಿಸಿಲ್ಲ ಮತ್ತು ತನ್ನಿಂದ ತಯಾರಾಗುತ್ತಿರುವ ಉತ್ಪನ್ನಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದಿದೆ.

ಅಲ್ಲದೆ ಈ ಸಂಬಂಧ ಮೊದಲು ವರದಿ ಮಾಡಿದ 'ಫೊನಿಕ್ಸ್ ಟಿವಿ' ವಿರುದ್ಧ ಕಾನೂನು ಸಮರ ನಡೆಸುವುದಾಗಿ ಕಂಪನಿ ಹೇಳಿಕೊಂಡಿದೆ.

ತಮ್ಮ ಸಂಸ್ಥೆಯ ಹಾಲಿನ ಪುಡಿಯಿಂದಾಗಿ ಅವಧಿಗೆ ಮುಂಚೆ ಹೆಣ್ಣು ಮಕ್ಕಳು ಮೈ ನೆರೆದಿದ್ದಾರೆ, ಗ್ರಾಹಕರಿಗೆ ಮೋಸ ಮಾಡಲಾಗಿದೆ ಎಂದು ಕಂಪನಿಯ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಉದ್ಯಮದಲ್ಲಿ ಅನಗತ್ಯ ಮಧ್ಯಪ್ರವೇಶಿಸಿರುವುದರ ವಿರುದ್ಧ ಹೋರಾಡುವುದಾಗಿ ಸಿರೂತ್ರಾ ತಿಳಿಸಿದೆ.

ಜಗತ್ತಿಗೆಲ್ಲ ನಕಲಿ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಖ್ಯಾತಿಯನ್ನು ಪಡೆದಿರುವ ಚೀನಾಕ್ಕೆ ಅದೇ ಈಗ ತಿರುಮಂತ್ರವಾಗಿರುವುದು ಸ್ಪಷ್ಟ. ಆದರೆ ಏನೂ ತಿಳಿಯದ ಹಸುಗೂಸುಗಳ ಮೇಲೆ ಇದರ ಪ್ರಯೋಗವಾಗಿರುವುದು ಮಾತ್ರ ದುರದೃಷ್ಟಕರ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ