ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ:ಒಂದೆಡೆ ಪ್ರವಾಹ, ಮತ್ತೊಂದೆಡೆ ಹಿಂದೂಗಳ ಮನೆ ಲೂಟಿ! (Pak Hindus | Pakistan | Sindh | looted | flood | army)
Bookmark and Share Feedback Print
 
ಪ್ರವಾಹ ಪೀಡಿತ ಸಿಂಧ್ ಪ್ರಾಂತ್ಯದಲ್ಲಿ ಸಿಲುಕಿರುವ ಸಾವಿರಾರು ಮಂದಿಯ ಹಿಂದೂಗಳ ಮನೆಯನ್ನು ಸ್ಥಳೀಯರು ಲೂಟಿಗೈಯುತ್ತಿದ್ದು,ಆ ನಿಟ್ಟಿನಲ್ಲಿ ಈ ಸ್ಥಳಕ್ಕೆ ಕೂಡಲೇ ಆರ್ಮಿಯನ್ನು ಕಳುಹಿಸಿಕೊಡಬೇಕೆಂದು ಪಾಕಿಸ್ತಾನದ ಹಿಂದೂ ಸಮುದಾಯ ಮನವಿ ಮಾಡಿಕೊಂಡಿದೆ.

ಪಾಕಿಸ್ತಾನ ಹಿಂದೂ ಕೌನ್ಸಿಲ್ ಮುಖ್ಯಸ್ಥ ರಮೇಶ್ ಕುಮಾರ್ ಈ ಬಗ್ಗೆ ಕರಾಚಿ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, ಪ್ರವಾಹ ಪೀಡಿತ ಪ್ರದೇಶಗಳಿಗೆ ಸರಕಾರ ಕೂಡಲೇ ಆರ್ಮಿಯನ್ನು ರವಾನಿಸಬೇಕೆಂದು ಈ ಸಂದರ್ಭದಲ್ಲಿ ಹೇಳಿದರು. ಇಲ್ಲಿನ ಹಿಂದೂ ನಿವಾಸಿಗಳು ಒಂದೆಡೆ ಪ್ರವಾಹದಿಂದ ತತ್ತರಿಸಿದ್ದರೆ, ಮತ್ತೊಂದೆಡೆ ಸ್ಥಳೀಯರು ಗನ್ ಅನ್ನು ತೋರಿಸಿ ಲೂಟಿಗೈಯುತ್ತಿದ್ದಾರೆ ಎಂದು ವಿವರಿಸಿದರು.

ಈಗಾಗಲೇ ಸುಮಾರು 95 ಅಂಗಡಿ ಹಾಗೂ 50 ಮನೆಗಳನ್ನು ಧ್ವಂಸಗೊಳಿಸಿರುವ ಕಿಡಿಗೇಡಿಗಳು ಅಂಗಡಿ, ಮನೆಯಲ್ಲಿದ್ದ ಹಣ, ಚಿನ್ನ, ವಸ್ತುಗಳನ್ನೆಲ್ಲಾ ದೋಚಿದ್ದಾರೆ ಎಂದು ಕುಮಾರ್ ಹೇಳಿದರು.

ಅಷ್ಟೇ ಅಲ್ಲ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಹೋಗಲು ಕೂಡ ಭಯವಾಗುತ್ತಿದೆ. ಅದಕ್ಕೂ ಸ್ಥಳೀಯರು ಬೆದರಿಕೆ ಹಾಕುತ್ತಿದ್ದಾರೆ. ಹಲವರ ವಾಹನಗಳನ್ನೂ ಕದ್ದೊಯ್ಯಿದ್ದಾರೆ. ನಿಜಕ್ಕೂ ಸಿಂಧ್ ಪ್ರಾಂತ್ಯದಲ್ಲಿನ ಪ್ರವಾಹ ಪೀಡಿತ ಪ್ರದೇಶದ ಪರಿಸ್ಥಿತಿ ನಿಜಕ್ಕೂ ಹತೋಟಿ ತಪ್ಪಿ ಹೋಗಿದೆ. ಪೊಲೀಸರು ಕೂಡ ನೆರವಿಗೆ ಬರುತ್ತಿಲ್ಲ. ಒಟ್ಟಾರೆ ಇಲ್ಲಿನ ಹಿಂದೂಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ