ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟನ್; ಅಕ್ರಮ ಭಾರತೀಯ ವಲಸಿಗರ ಗಡೀಪಾರು (Indian immigrants | Britain | UKBA | Damian Green)
Bookmark and Share Feedback Print
 
ವಲಸೆ ಸಂಬಂಧಿ ಅಪರಾಧಗಳಲ್ಲಿ ಪಾಲ್ಗೊಂಡಿರುವ ಕನಿಷ್ಠ 18 ಮಂದಿ ಭಾರತೀಯರನ್ನು ಬ್ರಿಟನ್ ಬಂಧಿಸಿದ್ದು, ಶೀಘ್ರದಲ್ಲೇ ಅವರನ್ನು ಗಡೀಪಾರು ಮಾಡಲಿದೆ.

ಪಶ್ಚಿಮ ಲಂಡನ್‌ನಲ್ಲಿನ ಎರಡು ಬಾಣಸಿಗ ಸಂಸ್ಥೆಗಳಲ್ಲಿ, ಲೀಸೆಸ್ಟರ್‌ನಲ್ಲಿನ ವಸ್ತ್ರ ಕೈಗಾರಿಕೆ ಮತ್ತು ಅಬೆರ್ಡೀನ್‌ನಲ್ಲಿನ ರೆಸ್ಟಾರೆಂಟ್ ಒಂದರಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದ ಭಾರತೀಯರನ್ನು ಬ್ರಿಟನ್ ಗಡಿ ಭದ್ರತಾ ಪಡೆಗಳು ಬಂಧಿಸಿವೆ.

ಅಕ್ರಮ ಉದ್ಯೋಗ, ನಕಲಿ ಮದುವೆ, ನಕಲಿ ಕಾಲೇಜುಗಳು ಮತ್ತು ಸಂಘಟಿತ ವಲಸೆ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವವರ ಕುರಿತು ಗಡಿ ಭದ್ರತಾ ಪಡೆಯು ಜುಲೈ 22ರಿಂದ 29ರ ನಡುವೆ ರಾಷ್ಟ್ರವ್ಯಾಪಿ ಕಾರ್ಯಾಚರಣೆ ನಡೆಸಿದ ಸಂದರ್ಭಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಭಾರತದಲ್ಲಿನ ಬ್ರಿಟೀಷ್ ರಾಯಭಾರ ಕಚೇರಿ ಬುಧವಾರ ತಿಳಿಸಿದೆ.

ಬ್ರಿಟನ್‌ನಿಂದ ಅವರನ್ನು ಗಡೀಪಾರು ಮಾಡುವ ಬಗ್ಗೆ ಮುಂದಿನ ನಡೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಯಾವುದೇ ದಾಖಲೆಗಳಿಲ್ಲದೆ ದೇಶಕ್ಕೆ ಬರಲು ಅವಕಾಶ ನೀಡಿದ್ದಲ್ಲದೆ, ಕೆಲಸ ಕೊಟ್ಟ ನಾಲ್ವರು ಉದ್ಯಮಿಗಳ ಮೇಲೆ 180,000 ಪೌಂಡುಗಳ ದಂಡ ವಿಧಿಸುವ ಬೆದರಿಕೆಯನ್ನೂ ಸರಕಾರ ಹಾಕಿದೆ. ವಲಸಿಗರ ಕುರಿತು ಸೂಕ್ತ ಪರಿಶೀಲನೆ ನಡೆಸದೇ ಇದ್ದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳಿಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಬ್ರಿಟನ್‌ಗೆ ಅಕ್ರಮವಾಗಿ ವಲಸೆ ಬರುತ್ತಿರುವವರ ವಿರುದ್ಧ ನಾವು ಈ ಹಿಂದೆಂದಿಗಿಂತಲೂ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದೇವೆ. ಅಕ್ರಮ ವಲಸೆಯಿಂದಾಗಿ ಸಾರ್ವಜನಿಕ ಸೇವೆಗಳು, ಸ್ಥಳೀಯ ಸಮುದಾಯಗಳು ಮತ್ತು ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದನ್ನು ದೇಶ ಭರಿಸಲು ಸಾಧ್ಯವಿಲ್ಲ ಎಂದು ಬ್ರಿಟನ್ ವಲಸೆ ಸಚಿವ ಡೇಮಿಯನ್ ಗ್ರೀನ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ