ಪವಿತ್ರ ರಂಜಾನ್ ತಿಂಗಳ ಉಪವಾಸ ಬುಧವಾರದಿಂದ ವಿಶ್ವದಾದ್ಯಂತ ಸುನ್ನಿ ಮುಸ್ಲಿಮರು ಆರಂಭಿಸಿದ್ದು, ಷಿಯಾ ಪಂಗಡದವರು ಗುರುವಾರದಿಂದ ಉಪವಾಸ ಆರಂಭಿಸಲಿದ್ದಾರೆ.
ಇಂದಿನಿಂದ ಪವಿತ್ರ ರಂಜಾನ್ ತಿಂಗಳು ಆರಂಭಗೊಂಡಿದ್ದು, 30 ದಿನಗಳ ಕಾಲ ಉಪವಾಸ ನಡೆಯಲಿದ್ದು, ಅರೆಬಿಯನ್, ಗಲ್ಫ್ ಸೇರಿದಂತೆ ಈಜಿಪ್ಟ್, ಸೌದಿ ಅರೆಬಿಯಾ, ಇಂಡೋನೇಷ್ಯಾ, ಬಹರೈನ್, ಕುವೈಟ್, ಕತಾರ್‌ನಲ್ಲಿ ಉಪವಾಸ ಆರಂಭವಾಗಿದೆ. ಅಲ್ಲದೆ, ಅಫ್ಘಾನಿಸ್ತಾನ, ಸಿರಿಯಾ, ಯೆಮೆನ್, ಪ್ಯಾಲೆಸ್ತೇನ್, ಮಲೇಶ್ಯಾ ಹಾಗೂ ಸಿಂಗಾಪುರ್‌ಗಳಲ್ಲಿನ ಸುನ್ನಿಗಳು ರಂಜಾನ್ ಆರಂಭಿಸಿದ್ದಾರೆ.
ಪಾಕಿಸ್ತಾನ, ಇರಾನ್ ಸೇರಿದಂತೆ ವಿಶ್ವದ ಶಿಯಾ ಪಂಗಡದವರು ಗುರುವಾರದಿಂದ ಉಪವಾಸ ಆರಂಭಿಸಲಿದ್ದಾರೆ. ರಂಜಾನ್ ತಿಂಗಳು ಮುಸ್ಲಿಮರಿಗೆ ಪವಿತ್ರವಾಗಿದ್ದು, ಎಲ್ಲಾ ಮುಸ್ಲಿಮರು ರಂಜಾನ್ ಉಪವಾಸ ಕೈಗೊಳ್ಳುವ ಮೂಲಕ ಅಲ್ಲಾನ ಕೃಪೆಗೆ ಪಾತ್ರರಾಗಬೇಕು ಎಂದು ಸೌದಿ ರಾಜ ಅಬ್ದುಲ್ಲಾ ಮನವಿ ಮಾಡಿಕೊಂಡಿದ್ದಾರೆ.