ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಲ್‌ಟಿಟಿಇ ಅಪಾಯಕಾರಿ: ಕೆನಡಾ ಪ್ರವೇಶಕ್ಕೆ ಅನುಮತಿ ಇಲ್ಲ (LTTE | Canada | Sri Lanka | banned organisation | US)
Bookmark and Share Feedback Print
 
ನಿಷೇಧಿತ ಎಲ್‌ಟಿಟಿಇ ಸದಸ್ಯರು ಸೇರಿದಂತೆ ಸುಮಾರು 250 ಮಂದಿ ಶ್ರೀಲಂಕನ್ ನಿವಾಸಿಗಳನ್ನು ಕರೆದೊಯ್ಯುತ್ತಿರುವ ಹಡಗಿಗೆ ಕೆನಡಾ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಕಳೆದ ವರ್ಷ ಶ್ರೀಲಂಕಾ ಮಿಲಿಟರಿ ಪಡೆ ನಡೆಸಿದ ಅಂತಿಮ ಸೆಣಸಾಟದಲ್ಲಿ ಎಲ್‌ಟಿಟಿಇಯನ್ನು ಬಗ್ಗುಬಡಿದಿತ್ತು. ಅಲ್ಲದೇ, ಎಲ್‌ಟಿಟಿಇ ಕೆನಡಾ ಮತ್ತು ಅಮೆರಿಕದಲ್ಲಿ ನಿಷೇಧಿತ ಸಂಘಟನೆ ಎಂದು ಘೋಷಿಸಿತ್ತು.

ಆ ನೆಲೆಯಲ್ಲಿ ನಿಷೇಧಿತ ಸಂಘಟನೆಯ ಸದಸ್ಯರನ್ನು ಕರೆದೊಯ್ಯುತ್ತಿರುವ ಹಡಗನ್ನು ಕೆನಡಾ ಪ್ರವೇಶಿಸಲು ಅನುವು ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 2006ರಲ್ಲಿ ಕೆನಡಾ ಎಲ್‌ಟಿಟಿಇಯನ್ನು ನಿಷೇಧಿತ ಸಂಘಟನೆ ಎಂದು ಘೋಷಿಸಿತ್ತು.

ಆ ಬಗ್ಗೆ ಹೆಚ್ಚಿನ ವಿವರಣೆ ನೀಡುವುದಿಲ್ಲ ಎಂದು ಕೆನಡಾ ಸಾರ್ವಜನಿಕ ರಕ್ಷಣಾ ಸಚಿವ ವಿಕ್ ಟೋವ್ಸ್ ಪ್ರತಿಕ್ರಿಯೆ ನೀಡಿ, ಎಲ್‌ಟಿಟಿಇ ಸದಸ್ಯರನ್ನೊಳಗೊಂಡ ಹಡಗು ಯಾಕೆ ಕೆನಡಾಕ್ಕೆ ಬರಬೇಕು ಎಂಬುದೇ ನಮ್ಮ ಪ್ರಶ್ನೆಯಾಗಿದೆ ಎಂದರು. ಅವೆಲ್ಲಕ್ಕಿಂತ ಮುಖ್ಯವಾಗಿ ಎಲ್‌ಟಿಟಿಇ ಉಗ್ರಗಾಮಿ ಸಂಘಟನೆ ಎಂದು ಈಗಾಗಲೇ ಘೋಷಿಸಲಾಗಿದೆ. ಶ್ರೀಲಂಕಾದಲ್ಲಿಯೇ ಎಲ್‌ಟಿಟಿಇ ನಾಗರಿಕರನ್ನು ಕೊಲ್ಲಲು ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿತ್ತು. ಕೆನಡಾದಲ್ಲಿರುವ ತಮಿಳು ಸಮುದಾಯದವರಿಂದ ಎಲ್‌ಟಿಟಇ ಸಂಘಟನೆ ನೆರವಿಗೆ ಧನ ಸಹಾಯ ಪಡೆಯುತ್ತಿತ್ತು. ಹಾಗಾಗಿ ಅಂತಹ ಸಂಘಟನೆ ಸದಸ್ಯರಿಗೆ ದೇಶದೊಳಕ್ಕೆ ಬರಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ