ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕ್ರಿಶ್ಚಿಯನ್‌ ಜನರನ್ನು ಕೊಲ್ಲಿ: ಅಲ್ ಖಾಯಿದಾ ಕರೆ (Christians | Saudi al-Qaida | Arabian | US military | Said al-Shihri)
Bookmark and Share Feedback Print
 
ಸೌದಿ ಅರೆಬಿಯಾದ ವಿರುದ್ಧ ಕಿಡಿಕಾರಿರುವ ಅಲ್ ಖಾಯಿದಾದ ಸೌದಿ ವರಿಷ್ಠ, ದೇಶದಲ್ಲಿ ವಾಸವಾಗಿರುವ ಕ್ರಿಶ್ಚಿಯನ್‌ರನ್ನು ಕೊಲ್ಲುವಂತೆ ಬುಧವಾರ ನೂತನವಾಗಿ ಬಿಡುಗಡೆಗೊಳಿಸಿರುವ ಆಡಿಯೋ ಸಂದೇಶದಲ್ಲಿ ಕರೆ ನೀಡಿದ್ದಾನೆ.

ಇಸ್ಲಾಮಿಸ್ಟ್ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಆಡಿಯೋ ಟೇಪ್‌ನಲ್ಲಿ, ಸೌದಿ ಅರೆಬಿಯಾ ಸರಕಾರವನ್ನು ಉರುಳಿಸುವುದಾಗಿ ಬೆದರಿಕೆ ಹಾಕಿದ್ದು, ಇಸ್ರೇಲ್ ಮೇಲೆ ದಾಳಿ ನಡೆಸುವಂತೆಯೂ ಕರೆ ಕೊಟ್ಟಿದ್ದಾನೆ.

ದೇಶದಲ್ಲಿರುವ ಕ್ರಿಶ್ಚಿಯನ್‌ರನ್ನು ಕೊಲ್ಲುವ ಮೂಲಕ ಇಸ್ಲಾಮ್ ಧರ್ಮಯುದ್ಧವನ್ನು ಎತ್ತಿಹಿಡಿಯಬೇಕು ಎಂದು ಎಕ್ಯೂಎಪಿಯ ಅಲ್ ಶಿಹ್ರಿ ಕಿಡಿಕಾರಿದ್ದಾನೆ. ಅಲ್ಲದೆ, ದಾಳಿ ನಡೆಸುವ ಸಂದರ್ಭದಲ್ಲಿ ಕಣ್‌ತಪ್ಪಿನಿಂದಾಗಿ ನಡೆಯುವ ಮುಸ್ಲಿಮರ ಹತ್ಯೆಯನ್ನು ಸಾಧ್ಯವಾದಷ್ಟು ತಡೆಯಬೇಕು ಎಂದು ಅಲ್ ಖಾಯಿದಾ ಬೆಂಬಲಿಗರಲ್ಲಿ ಮನವಿ ಮಾಡಿಕೊಂಡಿದ್ದಾನೆ.

ಶಸ್ತ್ರಸಜ್ಜಿತ ಯಾವುದೇ ಬೆಂಬಲಿಗ ಪಡೆ ಇರಲಿ ಇಸ್ರೇಲ್ ಮೇಲೆ ದಾಳಿ ನಡೆಸಬೇಕು ಎಂದು ಒತ್ತಾಯಿಸಿದ್ದಾನೆ. ಇಸ್ರೇಲ್ ವಿರುದ್ಧದ ಶಸ್ತ್ರಾಸ್ತ್ರ ಎತ್ತಿ ಹೋರಾಟ ನಡೆಸಬೇಕಾಗಿದೆ. ಅದು ಕೇವಲ ನಿಮ್ಮಿಂದ ಕೆಲವೇ ಕಿಲೋ ಮೀಟರನಷ್ಟು ದೂರದಲ್ಲಿದೆ. ಹಾಗಾಗಿ ದಾಳಿ ನಡೆಸುವುದು ಕಷ್ಟವೇನಲ್ಲ ಎಂದು ಸಲಹೆ ಶೆಹ್ರಿ ಸಲಹೆ ನೀಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ