ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೆ.11ರಂದು ಕುರಾನ್ ಸುಡಬೇಡಿ: ಫ್ಲೋರಿಡಾ ಚರ್ಚ್‌ಗೆ ಸುನ್ನಿ (Quran | Sunni Muslim | September 11 | Cairo | America)
Bookmark and Share Feedback Print
 
ಫ್ಲೋರಿಡಾ ಚರ್ಚ್ ಸೆಪ್ಟೆಂಬರ್ 11ರಂದು ಇಸ್ಲಾಮ್‌ನ ಪವಿತ್ರ ಧರ್ಮಗ್ರಂಥವಾದ ಕುರಾನ್ ಅನ್ನು ಸುಡುವ ಪ್ರತಿಭಟನೆಗೆ ವಿಶ್ವದ ಸುನ್ನಿ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕುರಾನ್ ಸುಡುವ ಯೋಜನೆ ಹಾಕಿಕೊಳ್ಳುವ ಮೂಲಕ ಫ್ಲೋರಿಡಾ ಚರ್ಚ್ ದ್ವೇಷವನ್ನು ಮತ್ತಷ್ಟು ಹೆಚ್ಚಿಸುವ ಮತ್ತು ತಾರತಮ್ಯ ಧೋರಣೆ ನೀತಿಯನ್ನು ದುಪ್ಪಟ್ಟುಗೊಳಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಈಜಿಪ್ಟ್‌ನ ಅಲ್ ಅಜಾಹರ್ಸ್ಸ್ ಸುಪ್ರೀಂ ಕೌನ್ಸಿಲ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಅಲ್ಲದೆ, ಉಳಿದ ಅಮೆರಿಕನ್ ಚರ್ಚ್‌ಗಳೂ ಕೂಡ ಫ್ಲೋರಿಡಾ ಚರ್ಚ್‌ನ ಕೃತ್ಯವನ್ನು ಖಂಡಿಸಬೇಕೆಂದು ಕರೆ ನೀಡಿದೆ. ಅಮೆರಿಕದಲ್ಲಿ ನಡೆದ 9/11ರ ಸ್ಫೋಟದಲ್ಲಿ ಮಡಿದವರ ಸ್ಮರಣಾರ್ಥವಾಗಿ ಸೆಪ್ಟೆಂಬರ್ 11ರಂದು ಕುರಾನ್ ಸುಡುವುದಾಗಿ ಫ್ಲೋರಿಡಾ ಚರ್ಚ್ ಘೋಷಿಸಿ, ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಕೈಜೋಡಿಸುವಂತೆ ಮನವಿ ಮಾಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ