ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೆಜ್ ಕಯಾನಿಯ ಅಧಿಕಾರಾವಧಿಯನ್ನು ಮೂರು ವರ್ಷಗಳ ಕಾಲ ಮುಂದುವರಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ಹಿನ್ನೆಲೆಯಲ್ಲಿ ಈ ಬಗ್ಗೆ ಉತ್ತರ ಕೊಡುವಂತೆ ಗುರುವಾರ ಆದೇಶ ನೀಡಿದೆ.
ಕಯಾನಿ ಅಧಿಕಾರ ಅವಧಿ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೇಶಾವರ ಹೈಕೋರ್ಟ್ ವಿಭಾಗೀಯ ಪೀಠ, ಈ ಬಗ್ಗೆ ಆಡಳಿತಾರೂಢ ಸರಕಾರದ ನಿಲುವು ಏನೆಂಬುದನ್ನು ಕೋರ್ಟ್‌ಗೆ ತಿಳಿಸುವಂತೆ ಡೆಪ್ಯುಟಿ ಅಟಾರ್ನಿ ಜನರಲ್‌ಗೆ ನೋಟಿಸ್ ಜಾರಿಗೊಳಿಸಿದೆ.
ಕಯಾನಿ ಅಧಿಕಾರ ವಿಸ್ತರಣೆ ಪ್ರಶ್ನಿಸಿ ಪತ್ರಕರ್ತರೂ ಹಾಗೂ ವಕೀಲರಾಗಿರುವ ಶಾಹಿದ್ ಒರ್‌ಕಾಜೈ ಅವರು ಜುಲೈ 22ರಂದು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರೊಂದಿಗೆ ಚರ್ಚೆ ನಡೆಸಿದ ನಂತರ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರು ಕಯಾನಿ ಅಧಿಕಾರಾವಧಿ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದರು ಎಂದು ಶಾಹಿದ್ ಇಂದು ಕೋರ್ಟ್ ವಿಚಾರಣೆ ವೇಳೆ ತಿಳಿಸಿದ್ದರು. ಆ ನಿಟ್ಟಿನಲ್ಲಿ ಈ ಆದೇಶ ಸಂವಿಧಾನಬಾಹಿರ ಎಂಬುದಾಗಿ ಘೋಷಿಸುವಂತೆ ಕೋರ್ಟ್‌ಗೆ ಮನವಿ ಮಾಡಿಕೊಂಡರು.