ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಲವನ್ನು ತಡೆಯೋರು ಯಾರೂ ಇಲ್ಲ; ಇಲ್ಲಿ ನಿಜವಾಗಿದೆ (Net reunites mom-children | Vicki Rohring | Scott | Karen)
Bookmark and Share Feedback Print
 
ಎಂದೋ ಸತ್ತು ಹೋಗಿದ್ದಾರೆ ಅಂದುಕೊಂಡದ್ದು ಸುಳ್ಳಾಗಬಹುದು, ಮಕ್ಕಳನ್ನು ಕಳೆದುಕೊಂಡವರು ಮತ್ತೆ ಪಡೆಯಬಹುದು. ಹೌದು, ತನ್ನ ಮಕ್ಕಳಿಬ್ಬರು ಕಾರು ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ ಎಂದು ಭಾವಿಸಿದ್ದ ತಾಯಿಯೊಬ್ಬಳಿಗೆ 34 ವರ್ಷಗಳ ನಂತರ ಅನರ್ಘ್ಯ ರತ್ನಗಳು ವಾಪಸ್ಸಾಗಿವೆ. ಇದಕ್ಕೆ ಕಾರಣವಾಗಿರುವುದು ಇಂಟರ್ನೆಟ್.

ಇದು ನಡೆದಿರುವುದು ಅಮೆರಿಕಾದ ನ್ಯೂಯಾರ್ಕ್‌ನಲ್ಲಿ. 1976ರ ಅಕ್ಟೋಬರ್ ತಿಂಗಳಿನಲ್ಲಿ ತನ್ನ ಗಂಡನ ಮನೆಯಲ್ಲಿ ತಂಗಿ ವಾಪಸ್ ಬರುತ್ತಿದ್ದಾಗ ಗಂಡು ಮಗು ಸ್ಕಾಟ್ ಮತ್ತು ಮಗಳು ಕರೇನ್ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ ಎಂದು ತಾಯಿ ವಿಕ್ಕಿ ರೋಹ್ರಿಂಗ್‌ಗೆ ಹೇಳಲಾಗಿತ್ತು.

ಆದರೆ ಇದು ಸುಳ್ಳಾಗಿತ್ತು ಎಂಬುದೀಗ ಬಹಿರಂಗವಾಗಿದೆ. ಮಕ್ಕಳನ್ನು ತನ್ನ ವಶದಲ್ಲೇ ಇಟ್ಟುಕೊಳ್ಳುವ ಸಲುವಾಗಿ ವಿಕ್ಕಿಯ ಮಾಜಿ ಗಂಡ ಜಿಮ್ಮಿ ಬ್ಲೇಕ್ ಸುಳ್ಳು ಹೇಳಿದ್ದ. ಆದರೂ ಇದೀಗ ಇಂಟರ್ನೆಟ್ ಸಹಾಯದಿಂದ ತಾಯಿ-ಮಕ್ಕಳು ಒಂದಾಗಿದ್ದಾರೆ.

ಇನ್ಯಾವತ್ತೂ ನಾನು ನನ್ನ ಮಕ್ಕಳನ್ನು ಕಳೆದುಕೊಳ್ಳಲಾರೆ. ಮಕ್ಕಳನ್ನು ಮರಳಿ ಪಡೆದಿರುವುದು ಕನಸೊಂದು ನನಸಾಗಿರುವ ಅನುಭವವನ್ನು ತಂದಿದೆ ಎಂದು 63ರ ಹರೆಯ ವಿಕ್ಕಿ ಭಾವುಕರಾಗಿ ಹೇಳಿಕೊಂಡಿದ್ದಾರೆ.

ನನ್ನ ಮಾಜಿ ಗಂಡ ದೂರವಾಣಿ ಕರೆ ಮಾಡಿ, ಮಕ್ಕಳು ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದ. ಆದರೆ ಅಪಘಾತ ನಡೆದಿರುವುದು ಎಲ್ಲಿ ಮತ್ತು ಮಕ್ಕಳನ್ನು ಎಲ್ಲಿ ಹೂತು ಹಾಕಲಾಯಿತು ಸೇರಿದಂತೆ ಯಾವೊಂದು ವಿಚಾರವನ್ನೂ ನನಗೆ ತಿಳಿಸದೇ ಮುಚ್ಚಿಡಲಾಯಿತು ಎಂದು ತಿಳಿಸಿದ್ದಾರೆ.

ಅಂದು ಪುಟ್ಟ ಮಕ್ಕಳಾಗಿದ್ದ ಸ್ಕಾಟ್‌ಗೆ ಈಗ 41, ಕರೇನ್‌ಗೆ 39 ತುಂಬಿದೆ. ತನ್ನ ಪತ್ನಿಯ ಜತೆಗಿನ ಸಂಘರ್ಷದ ವಿಚಾರವನ್ನು ಮಕ್ಕಳಿಗೆ ಬಿಡಿಸಿ ಹೇಳುತ್ತಾ, ಪತ್ನಿಗೆ ಅಂದರೆ ಮಕ್ಕಳ ತಾಯಿಗೆ ಸುಳ್ಳು ಹೇಳಿರುವುದನ್ನು ಜಿಮ್ಮಿ ಬಹಿರಂಗಪಡಿಸಿದ್ದ. ಆಕೆ ಸತ್ತಿರಬಹುದು, ಇಲ್ಲವೇ ವಿದೇಶದಲ್ಲಿರಬಹುದು ಎಂದೂ ಆತ ಹೇಳಿದ್ದ.

ಇಷ್ಟಕ್ಕೇ ತಾಯಿಯನ್ನು ಸೇರಬೇಕೆಂಬ ಹಪಹಪಿಯನ್ನು ಬೆಳೆಸಿಕೊಂಡ ಸ್ಕಾಟ್-ಕರೇನ್, ಪತ್ರಿಕೆಗಳಲ್ಲಿ ಮತ್ತು ಇಂಟರ್ನೆಟ್‌ಗಳಲ್ಲಿ ಜಾಹೀರಾತುಗಳನ್ನು ನೀಡಿದರು. ಅಲ್ಲದೆ ಖಾಸಗಿ ಪತ್ತೇದಾರರನ್ನೂ ನೇಮಿಸಿದರು. ಕೊನೆಗೂ ಇಂಟರ್ನೆಟ್ ಮೂಲಕ ತಾಯಿಯನ್ನು ಪತ್ತೆ ಮಾಡಲು ಸಾಧ್ಯವಾಯಿತು ಎಂದು ಪತ್ರಿಕೆಯೊಂದು ತನ್ನ ವರದಿಯಲ್ಲಿ ಹೇಳಿದೆ.

ಆದರೆ ಮಕ್ಕಳು ಅಪಘಾತದಲ್ಲಿ ಸತ್ತಿದ್ದಾರೆ ಎಂದು ಮಾಜಿ ಪತ್ನಿಗೆ ನಾನು ಹೇಳಿಲ್ಲ ಎಂದು ಜಿಮ್ಮಿ ಇದೀಗ ವಾದಿಸುತ್ತಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ