ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮತ್ತೆ ಭಾರತ, ಪಾಕ್ ಮೇಲೆ ದಾಳಿ: ಅಮೆರಿಕ ಎಚ್ಚರಿಕೆ (Pakistan | India | Terrorists strike | US | al Qaeda | Taliban)
Bookmark and Share Feedback Print
 
ಭಾರತ ಮತ್ತು ಪಾಕಿಸ್ತಾನ ಮೇಲೆ ಉಗ್ರಗಾಮಿಗಳ ಗುಂಪು ಮತ್ತೆ ದಾಳಿ ನಡೆಸುವ ಸಾಧ್ಯತೆ ಇರುವ ಬಗ್ಗೆ ಬಲವಾದ ಪುರಾವೆ ದೊರೆತಿರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕೆಂದು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

'ಮುಖ್ಯವಾಗಿ ಪಾಕಿಸ್ತಾನ, ಭಾರತ ಹಾಗೂ ದಕ್ಷಿಣ ಮತ್ತು ಮಧ್ಯ ಏಷ್ಯಾ ಪ್ರದೇಶಗಳ ಮೇಲೆ ಭಯೋತ್ಪಾದಕರ ಗುಂಪು ದಾಳಿ ನಡೆಸುವ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಆ ನಿಟ್ಟಿನಲ್ಲಿ ಪ್ರಪಂಚದಾದ್ಯಂತ ಕಟ್ಟೆಚ್ಚರದಲ್ಲಿ ಇರುವಂತೆ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ಗುರುವಾರ ಮುಂಜಾಗ್ರತಾ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಭಾರತ, ಪಾಕಿಸ್ತಾ, ದಕ್ಷಿಣ ಮತ್ತು ಸೆಂಟ್ರಲ್ ಏಷ್ಯಾದಲ್ಲಿ ಅಮೆರಿಕ ಪ್ರಜೆಗಳು ಅಥವಾ ಅಮೆರಿಕದ ಹಿತಾಸಕ್ತಿ ಪರವಾಗಿ ಕೆಲಸ ಮಾಡುವವರನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ವಿವರಿಸಿದೆ. ಭಾರತದಲ್ಲಿನ ಐಶಾರಾಮಿ ಹೋಟೆಲ್, ರೈಲ್ವೆ ನಿಲ್ದಾಣ, ಮಾರುಕಟ್ಟೆ ಪ್ರದೇಶ, ಸಿನಿಮಾ ಮಂದಿರ, ಮಸೀದಿ, ರೆಸ್ಟೋರೆಂಟ್ ಹಾಗೂ ನಗರ ಪ್ರದೇಶಗಳ ಮೇಲೆ ಉಗ್ರರ ದಾಳಿ ನಡೆಸುವ ಬೆದರಿಕೆ ಮುಂದುವರಿದಿದೆ ಎಂದು ಸ್ಟೇಟ್ ಡಿಪಾರ್ಟ್‌ಮೆಂಟ್ ಹೇಳಿದೆ.

ಅಲ್ ಖಾಯಿದಾ, ತಾಲಿಬಾನ್, ಲಷ್ಕರ್ ಇ ತೊಯ್ಬಾ ಸೇರಿದಂತೆ ಇನ್ನಿತರ ಉಗ್ರಗಾಮಿ ಗುಂಪುಗಳು ಈ ದಾಳಿ ನಡೆಸುವ ಸಂಚು ರೂಪಿಸಿವೆ. ಅಷ್ಟೇ ಅಲ್ಲ ಅವುಗಳ ಮುಖ್ಯ ಗುರಿ ಅಮೆರಿಕದ ಪ್ರಜೆಗಳಾಗಿದ್ದಾರೆ. ಹಾಗಾಗಿ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕೆಂದು ಸಲಹೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ