ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಲೇಷಿಯಾದಲ್ಲಿ ಹಸುಳೆಗಳನ್ನು ತ್ಯಜಿಸುವ ಹೆತ್ತವರಿಗೆ ಗಲ್ಲು (Malaysia | hanging parents | newborns | Shahrizat Abdul Jalil)
Bookmark and Share Feedback Print
 
ತಾವೇ ಹೆತ್ತ ಹಸುಗೂಸುಗಳನ್ನು ಬೇಡವೆಂದು ಕಂಡಲ್ಲಿ ಎಸೆದು ಬಿಡುವವರಿಗೆ ಮರಣ ದಂಡನೆ ವಿಧಿಸುವ ಕುರತು ಮಲೇಷಿಯಾ ಗಂಭೀರ ಚಿಂತನೆ ನಡೆಸುತ್ತಿದೆ. ಹಸುಳೆಗಳನ್ನು ಈ ರೀತಿಯಾಗಿ ಕೊಲ್ಲುತ್ತಿರುವ ಬೀಭತ್ಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾನೂನು ರೂಪಿಸಲು ಯೋಚಿಸಲಾಗುತ್ತಿದೆ.

ಆಗ ತಾನೇ ಹುಟ್ಟಿದ ಮಕ್ಕಳನ್ನು ಎಲ್ಲೆಂದರಲ್ಲಿ ಎಸೆದು ನಿರ್ಲಕ್ಷಿಸುವ ಪ್ರಕರಣಗಳನ್ನು ಹತ್ಯೆ ಅಥವಾ ಹತ್ಯಾಯತ್ನ ಕೃತ್ಯಗಳಡಿಯಲ್ಲಿ ತನಿಖೆ ನಡೆಸುವ ಕುರಿತು ಸರಕಾರ ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಪ್ರಸಕ್ತ ಮಲೇಷಿಯಾ ಕಾನೂನುಗಳ ಪ್ರಕಾರ ಹತ್ಯಾ ಪ್ರಕರಣಗಳಲ್ಲಿ ದೋಷಿಯೆಂದು ಕಂಡು ಬಂದಲ್ಲಿ ಮರಣ ದಂಡನೆ ವಿಧಿಸಬಹುದಾಗಿದೆ.

ಪ್ರಸಕ್ತ ಈ ರೀತಿ ಮಗುವನ್ನು ಪರಿತ್ಯಜಿಸುವವರಿಗೆ ಮೃದು ಕ್ರಿಮಿನಲ್ ಕಾನೂನುಗಳಡಿಯಲ್ಲಿ ತನಿಖೆ ನಡೆಸಿ 10 ವರ್ಷಗಳವರೆಗಿನ ಜೈಲು ಶಿಕ್ಷೆಯನ್ನಷ್ಟೇ ವಿಧಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಪರಿತ್ಯಜಿಸುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿರುವುದರಿಂದ ಸರಕಾರಕ್ಕೆ ಬೇರೆ ಆಯ್ಕೆಗಳಿಲ್ಲ. ಇದನ್ನು ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಹಸುಳೆಗಳನ್ನು ತಬ್ಬಲಿಗಳನ್ನಾಗಿಸುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಮಹಿಳೆ, ಕುಟುಂಬ ಮತ್ತು ಸಮುದಾಯ ಕಲ್ಯಾಣ ಸಚಿವ ಶಾಹ್ರಿಜಾತ್ ಅಬ್ದುಲ್ ಜಲೀಲ್ ಹೇಳಿದ್ದಾರೆ.

ಇಂತಹ ಕೃತ್ಯಗಳನ್ನು ಮುಂದುವರಿಸಲು ಸರಕಾರ ಅವಕಾಶ ನೀಡುವುದಿಲ್ಲ. ಹಾಗಾಗಿ ನಾವು ಈ ಕೃತ್ಯವನ್ನು ಹತ್ಯೆ ಅಥವಾ ಹತ್ಯಾ ಯತ್ನ ವಿಭಾಗಕ್ಕೆ ಸೇರಿಸಲು ಯೋಚನೆ ನಡೆಸುತ್ತಿದ್ದೇವೆ. ನಿಯಂತ್ರಣಕ್ಕೆ ಬೇರೆ ದಾರಿಗಳು ಕಾಣದೇ ಇದ್ದುದರಿಂದ ಮತ್ತು ನಮ್ಮ ಇದುವರೆಗಿನ ಮೃದು ಯತ್ನಗಳು ಫಲ ಕೊಡದೇ ಇರುವುದರಿಂದ ಇದು ನಮಗೆ ಅನಿವಾರ್ಯವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ