ಲಾಹೋರ್: ಇಡೀ ದೇಶವನ್ನೇ ನಲುಗಿಸಿರುವ ಪ್ರವಾಹ ಪರಿಸ್ಥಿತಿಗೆ ಪಾಕಿಸ್ತಾನಿಯರು ದೇವರನ್ನು ಮರೆತಿದ್ದರ ಪಾಪದ ಫಲವೇ ಕಾರಣ ಎಂದು ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಜಮಾತ್ ಉದ್ ದಾವಾದ ವರಿಷ್ಠ ಹಫೀಜ್ ಸಯೀದ್ ಅಸಮಾಧಾನವ್ಯಕ್ತಪಡಿಸಿದ್ದಾನೆ.
ದೇಶದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ ಪ್ರವಾಹಕ್ಕೆ ನಮ್ಮ ಪಾಪದ ಫಲ ಕಾರಣವಾಗಿದೆ ಎಂದು ಜೆಯುಡಿ ಪ್ರಮುಖ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಸಯೀದ್ ತಿಳಿಸಿದ್ದಾನೆ.
ಈ ಹಿಂದೆಯೂ ಪಾಕಿಸ್ತಾನದಲ್ಲಿ ಏನೇ ಆದರೂ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿಯೂ ನಾವು ಅದೇ ಛಲದಲ್ಲಿ ಮುಂದುವರಿಯಬೇಕು ಎಂದು ಸಲಹೆ ನೀಡಿದರು. ಪಾಕಿಸ್ತಾನದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸುಮಾರು 1700 ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ 14ಮಿಲಿಯನ್ ಜನರು ತೊಂದರೆಗೆ ಒಳಗಾಗಿದ್ದಾರೆ.
ಪ್ರವಾಹ ಸ್ಥಿತಿ ಈಗಲೂ ಪಂಜಾಬ್, ಸಿಂಧ್ ಹಾಗೂ ಬಲೂಚಿಸ್ತಾನ್ ಸೇರಿದಂತೆ ಪಾಕಿಸ್ತಾನದ ಹಲವೆಡೆ ಮುಂದುವರಿದಿದೆ. ಪ್ರವಾಹದಲ್ಲಿ ಸಾವನ್ನಪ್ಪಿರುವವರ ಸಂಖ್ಯೆಯನ್ನೂ ಕೂಡ ಸರಕಾರ ನಿಖರವಾಗಿ ಕೊಟ್ಟಿಲ್ಲ ಎಂದು ಸಯೀದ್ ಆರೋಪಿಸಿದ್ದಾನೆ.