ಲಂಕಾ ಮಿಲಿಟರಿ ಮಾಜಿ ವರಿಷ್ಠ ಸರತ್ ಫೋನ್ಸೆಕಾ ಅವರು ತಮ್ಮ ಸೇವಾವಧಿಯಲ್ಲಿ ರಾಜಕೀಯ ಮೇಲಾಟ ನಡೆಸಿ ದೋಷಿ ಎಂದು ಸಾಬೀತಾಗಿರುವ ನೆಲೆಯಲ್ಲಿ ರಾಂಕ್ ಮತ್ತು ಮೆಡಲ್ಸ್‌ಗಳನ್ನು ಶ್ರೀಲಂಕಾ ಮಿಲಿಟರಿ ಕೋರ್ಟ್ ಶುಕ್ರವಾರ ವಾಪಸ್ ಪಡೆದಿದೆ.
ಮಿಲಿಟರಿ ಮಾಜಿ ಅಧಿಕಾರಿ ಫೋನ್ಸೆಕಾ ಅವರ ವಿರುದ್ಧ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ಐದು ತಿಂಗಳ ಹಿಂದೆ ಮಿಲಿಟರಿ ಕೋರ್ಟ್‌ನ ತ್ರಿಸದಸ್ಯ ಆಯೋಗ ತನಿಖೆ ನಡೆಸಿ ದೋಷಿ ಎಂದು ಹೇಳಿತ್ತು. ಅಲ್ಲದೇ, ಫೋನ್ಸೆಕಾ ಅವರು ಹಾಲಿ ಸಂಸತ್ ಸದಸ್ಯರಾಗಿದ್ದಾರೆ. ಆ ನಿಟ್ಟಿನಲ್ಲಿ ಫೋನ್ಸೆಕಾ ಅವರು ತಮ್ಮ ರಾಂಕ್ ಮತ್ತು ಮೆಡಲ್ಸ್ ವಾಪಸ್ ಕೊಡಬೇಕೆಂದು ಆದೇಶ ನೀಡಿದೆ.
ಜನರಲ್ ಫೋನ್ಸೆಕಾ ಅವರು ಡೆಮೋಕ್ರಟಿಕ್ ನ್ಯಾಷನಲ್ ಅಲೆಯನ್ಸ್ ಪಕ್ಷದ ಸಂಸದರಾಗಿದ್ದಾರೆ. ಅವರನ್ನು ಮಿಲಿಟರಿ ಅಧಿಕಾರಿಗಳು ಬಂಧಿಸುವ ಸಂದರ್ಭದಲ್ಲಿಯೂ ಸಂಸದರಾಗಿದ್ದಾರೆ. ಆದರೆ ಫೋನ್ಸೆಕಾ ಬೆಂಬಲಿಗರು ಮಾತ್ರ ಇದು ರಾಜಕೀಯ ಪ್ರೇರಿತವಾದ ಆರೋಪ ಎಂದು ದೂರಿದ್ದಾರೆ.
ಅಲ್ಲದೇ, ಮಿಲಿಟರಿ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಫೋನ್ಸೆಕಾ ಅವರು ಸಿವಿಲಿಯನ್ ಕೋರ್ಟ್ ಮೆಟ್ಟಿಲೇರಬಹುದು ಎಂದು ತಿಳಿಸಿದೆ.