ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಿಪಿಪಿ ಸರಕಾರ ಉರುಳಿಸಲು ಪಾಕ್ ಆರ್ಮಿ ಸಂಚು (PPP | Pak Army | floods | Asif Ali Zardari | London)
Bookmark and Share Feedback Print
 
ಪಾಕಿಸ್ತಾನದ ಇತಿಹಾಸದಲ್ಲಿಯೇ ಕಂಡರಿಯದ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದರೂ ಸಹ ಪಾಕ್ ಸರಕಾರ ಮಾನವೀಯ ನೆಲೆಯಲ್ಲಿ ಸ್ಪಂದಿಸಲು ಮತ್ತು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡದ ಪರಿಣಾಮ ಆಡಳಿತಾರೂಢ ಪಿಪಿಪಿ ಸರಕಾರವನ್ನು ವಜಾಗೊಳಿಸಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಮಿಲಿಟರಿ ಪಡೆ ಸಂಚು ರೂಪಿಸಿದೆ ಎಂಬ ಅಂಶ ಬಯಲಾಗಿದೆ.

ಪ್ರವಾಹದಿಂದಾಗಿ ಪಾಕಿಸ್ತಾನ ತತ್ತರಿಸಿ ಹೋಗಿದ್ದರೆ ಮತ್ತೊಂದೆಡೆ ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಫ್ರಾನ್ಸ್, ಬ್ರಿಟನ್‌ಗೆ ಭೇಟಿ ನೀಡಿದ್ದರು. ಜರ್ದಾರಿ ಭೇಟಿ ದೇಶಾದ್ಯಂತ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಬ್ರಿಟನ್‌ನಲ್ಲಿಯೂ ಪಾಕ್ ಪ್ರಜೆಗಳು ವಿರೋಧ ವ್ಯಕ್ತಪಡಿಸಿ ಶೂ ಎಸೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದೀಗ ಜರ್ದಾರಿ ಮತ್ತೆ ರಷ್ಯಾ ಪ್ರವಾಸಕ್ಕೆ ತೆರಳಲು ಸಿದ್ದತೆ ನಡೆಸಿದ್ದಾರೆ. ಆ ನಿಟ್ಟಿನಲ್ಲಿ ಆಡಳಿತಾರೂಢ ಪಿಪಿಪಿ ಸರಕಾರವನ್ನು ಉರುಳಿಸಲು ಪಾಕ್ ಆರ್ಮಿ ಸಂಚು ರೂಪಿಸುತ್ತಿದೆ ಎಂದು ಪಾಕಿಸ್ತಾನದ ಪ್ರಮುಖ ಪತ್ರಕರ್ತ ನಾಜಮ್ ಸೇಠಿ ತಿಳಿಸಿರುವುದಾಗಿ ದಿ ಗಾರ್ಡಿಯನ್ ಪತ್ರಿಕೆ ವರದಿ ಹೇಳಿದೆ.

ಆಡಳಿತಾರೂಢ ಸರಕಾರವನ್ನು ಕಿತ್ತೊಗೆದು ಮಿಲಿಟರಿ ಆಡಳಿತ ತರಲು ರಹಸ್ಯ ಮಾತುಕತೆ ನಡೆದಿರುವುದಾಗಿ ಪತ್ರಿಕೆ ವಿವರಿಸಿದೆ. ನನಗೆ ತಿಳಿದಿರುವಂತೆ ಸರಕಾರ ಉರುಳಿಸುವ ಬಗ್ಗೆ ಚರ್ಚೆ ನಡೆದಿದೆ. ಆದರೆ ಆರ್ಥಿಕ ಹೊಡೆತದಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ ಆರ್ಮಿಯಿಂದ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ ಎಂಬುದು ತನ್ನ ಅಭಿಪ್ರಾಯ ಎಂದು ನಾಜಮ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ