ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನಕ್ಕೆ ಬೆದರಿಕೆ ಭಾರತದಿಂದಲ್ಲ, ಉಗ್ರರಿಂದ: ಐಎಸ್ಐ (ISI | Islamist militants | India | Pakistan)
Bookmark and Share Feedback Print
 
ಭಾರತ ಕೇಂದ್ರಿತ ಭೀತಿಯನ್ನು ಕೊನೆಗೂ ಪಾಕಿಸ್ತಾನ ತೊರೆದಿದೆ. ತನಗೆ ಪ್ರಮುಖ ಬೆದರಿಕೆಯಿರುವುದು ಭಾರತದಿಂದಲ್ಲ, ಬದಲಿಗೆ ಇಸ್ಲಾಮಿಕ್ ಭಯೋತ್ಪಾದಕರಿಂದ ಎಂದು ಪಾಕ್ ಬೇಹುಗಾರಿಕಾ ದಳ ಐಎಸ್ಐ ಒಪ್ಪಿಕೊಂಡಿದೆ.

ಪಾಕಿಸ್ತಾನದ ಶಕ್ತಿಶಾಲಿ ಮಿಲಿಟರಿ ಬೇಹುಗಾರಿಕಾ ದಳವಾಗಿರುವ ಐಎಸ್ಐ ಇತ್ತೀಚೆಗಷ್ಟೇ ತನ್ನ ಆಂತರಿಕ ಭದ್ರತಾ ಪರಿಶೀಲನೆಯನ್ನು ನಡೆಸಿದ್ದು, ಮೊತ್ತ ಮೊದಲ ಬಾರಿಗೆ ಭಾರತದಿಂದ ಪ್ರಮುಖ ಬೆದರಿಕೆಯಿಲ್ಲ ಎಂಬುದನ್ನು ಹೇಳಿದೆ ಎಂದು ಅದರ ಅಧಿಕಾರಿಯೊಬ್ಬರು ಹೇಳಿರುವುದನ್ನು ಉಲ್ಲೇಖಿಸಿ ಅಮೆರಿಕಾದ ಪತ್ರಿಕೆಯೊಂದು ವರದಿ ಮಾಡಿದೆ.

ಪ್ರತಿವರ್ಷ ನಡೆಯುವ ರಾಷ್ಟ್ರೀಯ ಸುರಕ್ಷತಾ ವಿಶ್ಲೇಷಣೆಯಲ್ಲಿ ಬಂದಿರುವ ಮೂರನೇ ಎರಡು ಭಾಗದಷ್ಟು ಅಭಿಪ್ರಾಯದ ಪ್ರಕಾರ ಪಾಕಿಸ್ತಾನಕ್ಕೆ ಪ್ರಮುಖ ಬೆದರಿಕೆಯಿರುವುದು ಭಾರತ ಅಥವಾ ಇನ್ನಿತರ ದೇಶಗಳಿಂದಲ್ಲ, ಅದು ಭಯೋತ್ಪಾದಕರಿಂದ ಎಂದು ಹೇಳಲಾಗಿದೆ.

ಇದು ಪ್ರಮುಖ ಬದಲಾವಣೆ, ಅಗತ್ಯವಾಗಿತ್ತು ಎಂದು ಭಯೋತ್ಪಾದನಾ ತಡೆ ತಜ್ಞ ಹಾಗೂ ವಿಶ್ವವಿದ್ಯಾಲಯವೊಂದರಲ್ಲಿ ಉಪನ್ಯಾಸಕರಾಗಿರುವ ಬ್ರೂಸ್ ಹಾಫ್‌ಮನ್ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ