ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತೈವಾನ್ ಮಿಲಿಟರಿ ಮಾಜಿ ಮುಖ್ಯಸ್ಥ ಮಿಂಗ್‌ಗೆ ಜೈಲುಶಿಕ್ಷೆ (Taiwan military | corruption charges | Taipei | military court)
Bookmark and Share Feedback Print
 
ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೈವಾನ್ ಮಿಲಿಟರಿ ಗುಪ್ತಚರ ಮಾಜಿ ಮುಖ್ಯಸ್ಥರೊಬ್ಬರಿಗೆ 14 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.

2008ರಲ್ಲಿ ಲೆಫ್ಪಿನೆಂಟ್ ಜನರಲ್ ಕೆ ಗುವಾಂಗ್ ಮಿಂಗ್ ಅವರು ಮಿಲಿಟರಿ ಗುಪ್ತಚರ ಬ್ಯುರೋದ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಸುಮಾರು 115,000 ಅಮೆರಿಕನ್ ಡಾಲರ್‌ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಮಂಗಳವಾರ ಮಿಲಿಟರಿ ಕೋರ್ಟ್‌ನಲ್ಲಿ ಸಾಬೀತಾಗಿತ್ತು.

ಅಲ್ಲದೆ, ಭ್ರಷ್ಟಾಚಾರ ಎಸಗುವಲ್ಲಿ ಸಹಕರಿಸಿದ ಮಿಂಗ್ ಅವರ ಕಾರ್ಯದರ್ಶಿಗೂ ಎರಡು ವರ್ಷ ಆರು ತಿಂಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿದೆ. ಕಳೆದ ವರ್ಷ ತೈವಾನ್ ಕೋರ್ಟ್ ಲಂಚ, ಬ್ಲ್ಯಾಕ್‌ಮೇಲ್ ಆರೋಪ ಹಾಗೂ ಮಿಲಿಟರಿ ರಹಸ್ಯ ದಾಖಲೆಗಳನ್ನು ಹೊರಹಾಕಿದ ಆರೋಪದ ಮೇಲೆ ಮಿಲಿಟರಿಯ ನಿವೃತ್ತ ಜನರಲ್‌ಗೆ ಹತ್ತು ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಇದು ದ್ವೀಪರಾಷ್ಟ್ರದ ಮಿಲಿಟರಿಯ ಅತ್ಯಂತ ದೊಡ್ಡ ಹಗರಣ ಇದಾಗಿತ್ತು ಎಂದು ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ