ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೆಡ್ಲಿ ಕುರಿತು ಇನ್ನಷ್ಟು ಮಾಹಿತಿ ನೀಡಿ: ಭಾರತಕ್ಕೆ ಪಾಕ್ (Pakistan | India | Mumbai attack case | David Headley)
Bookmark and Share Feedback Print
 
ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಡೇವಿಡ್ ಹೆಡ್ಲಿಯ ಕುರಿತು ಹೆಚ್ಚುವರಿ ಮಾಹಿತಿ ಮತ್ತು ಭಾರತಕ್ಕೆ ಭೇಟಿ ನೀಡಿರುವುದೂ ಸೇರಿದಂತೆ ಆತನ ಚಟುವಟಿಕೆಗಳ ವಿವರವನ್ನು ನೀಡುವಂತೆ ಪಾಕಿಸ್ತಾನವು 47 ಪ್ರಶ್ನೆಗಳನ್ನು ಭಾರತಕ್ಕೆ ಕಳುಹಿಸಿದ್ದು, ಇದು ಮುಂಬೈ ದಾಳಿ ಪ್ರಕರಣವನ್ನು ವಿಳಂಬಗೊಳಿಸಲು ಹೂಡಲಾಗಿರುವ ಮತ್ತೊಂದು ತಂತ್ರ ಎಂದು ವಿಶ್ಲೇಷಿಸಲಾಗಿದೆ.

ಮುಂಬೈ ದಾಳಿಯಲ್ಲಿ ಪಾಲ್ಗೊಂಡಿರುವ ಲಷ್ಕರ್ ಇ ತೋಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಆತನ ಸಹಚರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾರತವು ನೀಡಿದ್ದ ಪೂರಕ ದಾಖಲೆಗಳಿಗೆ ಪ್ರತಿಕ್ರಿಯೆ ನೀಡಿರುವ ಇಸ್ಲಾಮಾಬಾದ್, 2006ರಿಂದ 2009ರ ನಡುವೆ ಹೆಡ್ಲಿ ಭಾರತಕ್ಕೆ ಪ್ರಯಾಣಿಸಿರುವ ಒಂಬತ್ತು ಪ್ರಯಾಣಗಳ ಸಂಬಂಧ ಪ್ರಶ್ನಾವಳಿಯೊಂದನ್ನು ಕಳೆದ ವಾರ ನವದೆಹಲಿಗೆ ಕಳುಹಿಸಿದೆ.

ಅಮೆರಿಕಾದಲ್ಲಿ ದಾಳಿಯ ರೂವಾರಿ ಹೆಡ್ಲಿಯನ್ನು ವಿಚಾರಣೆ ನಡೆಸಿರುವ ಭಾರತದ ರಾಷ್ಟ್ರೀಯ ತನಿಖಾ ದಳವು ಇನ್ನಷ್ಟು ಮಾಹಿತಿಗಳನ್ನು ನೀಡಬೇಕೆಂದು ಪಾಕಿಸ್ತಾನದ ಆಂತರಿಕ ಸಚಿವಾಲಯವು ಭಾರತದಲ್ಲಿ ಕೇಳಿಕೊಂಡಿದೆ.

ಇದರಲ್ಲಿ ಹೆಡ್ಲಿಯ ಭಾರತ ಭೇಟಿಯ ಕುರಿತು 47 ಪ್ರಶ್ನೆಗಳನ್ನು ಕೇಳಲಾಗಿದೆ. ಅಲ್ಲದೆ ಆತ ದಾಳಿಗೂ ಮೊದಲು ಯಾರ ಜತೆಗೆಲ್ಲ ಸಂಪರ್ಕ ಇಟ್ಟುಕೊಂಡಿದ್ದ ಮುಂತಾದ ವಿವರಗಳನ್ನು ನೀಡುವಂತೆ ಪಾಕಿಸ್ತಾನ ಬೇಡಿಕೆ ಇಟ್ಟಿದೆ ಎಂದು ವರದಿಗಳು ಹೇಳಿವೆ.

ಚಿತ್ರ ನಿರ್ದೇಶಕ ಮಹೇಶ್ ಭಟ್ ಪುತ್ರ ರಾಹುಲ್ ಭಟ್ ಅವರನ್ನು ಮುಂಬೈಯಲ್ಲಿ ಭೇಟಿ ಮಾಡಿರುವುದು ಸೇರಿದಂತೆ ಇನ್ನಿತರ ವಿವರಗಳು ಬೇಕು. ಆತ ಯಾರ ಜತೆಗೆ ಯಾವ ರೀತಿಯ ಸಂಬಂಧ ಹೊಂದಿದ್ದಾನೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಿ ಎಂದು ಪತ್ರ ಕಳುಹಿಸಲಾಗಿದೆ.

ಆದರೆ ಇದಕ್ಕೆ ಭಾರತವು ಖಾರವಾಗಿ ಪ್ರತಿಕ್ರಿಯಿಸಿದೆ. ಈಗಾಗಲೇ ನಾವು ಹೆಡ್ಲಿ ಕುರಿತ ಎಲ್ಲಾ ಮಾಹಿತಿಗಳನ್ನೂ ಪಾಕಿಸ್ತಾನಕ್ಕೆ ನೀಡಿದ್ದೇವೆ. ಆದರೆ ಅವರು ಮತ್ತೆ ವಿಸ್ತೃತ ಮಾಹಿತಿ ಕೇಳುತ್ತಿದ್ದಾರೆ. ಇದು ಪ್ರಕರಣವನ್ನು ವಿಳಂಬಗೊಳಿಸುವ ತಂತ್ರವಲ್ಲದೆ ಮತ್ತೇನಲ್ಲ. ಆದರೂ ನಾವು ಉತ್ತರಿಸಲು ಸಿದ್ಧರಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ