ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರಧಾನಿ ಸಿಂಗ್ ವಿಶ್ವದ ಮೆಚ್ಚಿನ ನಾಯಕ: ನ್ಯೂಸ್‌ವೀಕ್ (world leader | Manmohan Singh | global economy | New York)
Bookmark and Share Feedback Print
 
PTI
ಭಾರತದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ವಿಶ್ವದ ಮೆಚ್ಚಿನ ಹತ್ತು ನಾಯಕರಲ್ಲಿ ಒಬ್ಬರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ನ್ಯೂಸ್‌ವೀಸ್ ನಿಯತಕಾಲಿಕ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಿದೆ. ಅಲ್ಲದೇ, ನೂರು ಉತ್ತಮ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 78ನೇ ಸ್ಥಾನವನ್ನು ಪಡೆದಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

77ರ ಹರೆಯದ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಏಳು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 21ನೇ ಶತಮಾನದಲ್ಲಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನ ಪಾತ್ರವಹಿಸುತ್ತಿದ್ದಾರೆ ಎಂದು ನಿಯತಕಾಲಿಕೆ ತಿಳಿಸಿದೆ.

'ದಿ ಲೀಟರ್ ಅದರ್ ಲೀಡರ್ಸ್ ಲವ್' ಎಂಬ ತಲೆಬರಹದಲ್ಲಿ ಪ್ರಕಟವಾದ ಲೇಖನದಲ್ಲಿ, ಖ್ಯಾತ ಅರ್ಥಶಾಸ್ತ್ರಜ್ಞರಾಗಿರುವ ಸಿಂಗ್ ಪ್ರಧಾನಿಯಾಗಿ ತಟಸ್ಥವಾಗಿದ್ದ ಸಮಾಜವಾದದ ಮೂಲಕ ಜಾಗತಿಕ ಆರ್ಥಿಕ ಹೊಡೆತವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಶ್ಲಾಘಿಸಿದೆ.

ನಿಜಕ್ಕೂ ಸಿಂಗ್ ಅವರು ತಮ್ಮ ಸಭ್ಯ, ವಿನೀತ ಹಾಗೂ ಭ್ರಷ್ಟಚಾರ ರಹಿತ ವ್ಯಕ್ತಿಯಾಗಿ ವಿಶ್ವದ ಗಮನ ಸೆಳೆದ ನಾಯಕರಾಗಿದ್ದಾರೆ ಎಂದು ಲೇಖನದಲ್ಲಿ ಹೊಗಳಲಾಗಿದೆ. ಸೌಮ್ಯ ಮಾತುಗಾರರಾಗಿರುವ ಮನಮೋಹನ್ ಸಿಂಗ್ ಅವರು ರಾಜಕಾರಣಿಗಳಿಗೆ ಅವರು ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ ಮಾಜಿ ನಿರ್ದೇಶಕ ಮತ್ತು ಈಜಿಪ್ಟ್ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯಾಗಿದ್ದ ಮೊಹಮ್ಮದ್ ಎಲ್‌ಬಾರ್ಡೈ ಅವರ ಹೇಳಿಕೆಯನ್ನೂ ಪತ್ರಿಕೆ ಉಲ್ಲೇಖಿಸಿದೆ.

ನಿಯತ ಕಾಲಿಕದ ಪಟ್ಟಿಯಲ್ಲಿ ಸಿಂಗ್ ಸೇರಿದಂತೆ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್, ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ, ಚೀನಾ ಪ್ರಧಾನಿ ವೆನ್ ಜಿಯಾಬಾವೋ, ಬ್ರೆಜಿಲ್ ಅಧ್ಯಕ್ಷ ಲುಜ್ ಇನ್‌ಸಿಯೋ ಲುಲಾ ಡಾ ಡಿಸಿಲ್ವ ಮತ್ತು ಸೌದಿ ಅರೇಬಿಯಾ ರಾಜ ಅಬ್ದುಲ್ಲಾ ಬಿನ್ ಅಬ್ದೆಲ್ ಅಜಿಜ್ ಅಲ್ ಸೌದ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ