ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಶೀತ' ಸಮರ: ಕ್ಷಯವಾಗುತ್ತಿದ್ದಾನೆ ಚಂದಿರ (Moon | Apollo Mission | Lunar Shrinking | Science | Space)
Bookmark and Share Feedback Print
 
PTI
ಮಕ್ಕಳಿದ್ದಾಗ ನಮ್ಮ ಅಳುವನ್ನು ತೊಲಗಿಸುತ್ತಿದ್ದ ಚಂದಿರ ಕುಬ್ಜವಾಗುತ್ತಿದ್ದಾನೆಯೇ? ಹೌದು ಎನ್ನುತ್ತಾರೆ ವಿಜ್ಞಾನಿಗಳು. ಸಾಮಾನ್ಯವಾಗಿ ಘನವಸ್ತುವು ತಣ್ಣಗಾದಾಗ ಮತ್ತು ಕುಗ್ಗಿದಾಗ ಉಂಟಾಗುವಂತಹಾ ಒಡಕುಗಳು ಚಂದ್ರನ ಮೇಲ್ಮೈ ಮೇಲೆ ಕಂಡುಬಂದಿವೆ ಎಂದಿದ್ದಾರೆ ಅವರು. ಆದರೆ, ಚಂದ್ರನ ಈ ಕುಗ್ಗುವಿಕೆಯು ತೀರಾ ತೀರಾ ನಿಧಾನವಾಗಿರುವದರಿಂದ ಸದ್ಯಕ್ಕೆ ಆತಂಕ ಪಡಬೇಕಿಲ್ಲ ಎಂದೂ ಹೇಳಿದ್ದಾರವರು.

ಅವರ ಸಂಶೋಧನೆಯ ಪ್ರಕಾರ, ಗಾಳಿ ಹೋಗುತ್ತಿರುವ ಬಲೂನಿನಂತೆ, ಚಂದ್ರನ ಒಳಮೈ ಶೀತಲೀಕರಣವಾಗುವಾಗ ಚಂದ್ರನೂ ಕುಗ್ಗುತ್ತಿರುತ್ತಾನೆ. ಇತ್ತೀಚೆಗಿನ ಚಾಂದ್ರ ವರ್ಷಮಾನದಲ್ಲಿ ಈ ಕುಗ್ಗುವಿಕೆಯಿಂದಾಗಿ ಭೂಮಿಯ ನೈಸರ್ಗಿಕ ಉಪಗ್ರಹವಾಗಿರುವ ಚಂದ್ರನ ತ್ರಿಜ್ಯ (ರೇಡಿಯಸ್) ಸುಮಾರು 100 ಮೀಟರ್‌ಗಳಷ್ಟು ಕಡಿಮೆಯಾಗಿದೆ.

ಒಳಮೈ ಶೈತ್ಯವಾಗುವಾಗ, ಅದು ಕುಗ್ಗುತ್ತದೆ. ಹೀಗಾಗಿ ಚಂದ್ರನ ಹೊರಪದರವು ಈ ಗಾತ್ರಕ್ಕೆ ತನ್ನನ್ನು ಕುಗ್ಗಿಸಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಚಂದ್ರನ ಹೊರಪದರದಲ್ಲಿ ಬಿರುಕುಗಳು ಮೂಡುತ್ತವೆ ಎಂದು ಸ್ಮಿತ್‌ಸೋನಿಯನ್ ಇನ್‌ಸ್ಟಿಟ್ಯೂಶನ್‌ನ ಸಂಶೋಧನಾ ತಂಡದ ಮುಖ್ಯ ವಿಜ್ಞಾನಿ ಡಾ. ಥೋಮಸ್ ವಾಲ್ಟರ್ ತಿಳಿಸಿದ್ದಾರೆ.

1970ರ ದಶಕದ ಆರಂಭದಲ್ಲೇ ಅಪೋಲೋ ನೌಕೆಗಳು ಸೆರೆಹಿಡಿದ ಚಿತ್ರಗಳಲ್ಲೇ ಈ ಬಿರುಕುಗಳು ಕಂಡು ಬಂದಿದ್ದವು.

ಆದರೆ ಸುತ್ತಳತೆಯಲ್ಲಿ ಭೂಮಿಯ ನಾಲ್ಕನೇ ಒಂದರಷ್ಟಿರುವ ಚಂದ್ರನು ಕುಗ್ಗುತ್ತಾ ಹೋಗಿ ನಾಶವಾಗುವುದಿಲ್ಲ ಅಥವಾ ಭೂಮಿಯ ಮೇಲೆ ಇದು ಯಾವುದೇ ಪರಿಣಾಮವನ್ನೂ ಬೀರುವುದಿಲ್ಲ ಎಂದೂ ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ