ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಿಹಾದಿ ಸಾಹಿತ್ಯ; ಅಮೆರಿಕಾದಲ್ಲಿ ಭಾರತೀಯನ ಸೆರೆ (India | jehadi literature | US | Vijay Kumar)
Bookmark and Share Feedback Print
 
ಜಿಹಾದಿ ಸಾಹಿತ್ಯವನ್ನು ಹೊಂದಿದ್ದ ಭಾರತೀಯನೊಬ್ಬನನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ. ಹೌಸ್ಟನ್‌ನಲ್ಲಿ ಜಾರ್ಜ್ ಬುಶ್ ಇಂಟರ್‌ಕಾಂಟಿನೆಂಟಲ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿರುವ ಆರೋಪಿಯನ್ನು ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ.

ವಿಚಿತ್ರವಾಗಿ ವರ್ತಿಸುತ್ತಿದ್ದ 40 ಹರೆಯದ ಭಾರತೀಯನ ಬ್ಯಾಗುಗಳನ್ನು ಶುಕ್ರವಾರ ಭದ್ರತಾ ಅಧಿಕಾರಿಗಳು ತಪಾಸಣೆ ನಡೆಸಿದಾಗ ಜಿಹಾದಿ ಸಾಹಿತ್ಯವಿರುವುದು ಬೆಳಕಿಗೆ ಬಂದಿತ್ತು. ಮುಂಬೈಯವನಾಗಿರುವ ಈತನನ್ನು ತಕ್ಷಣವೇ ಬಂಧಿಸಲಾಯಿತು ಎಂದು 'ನ್ಯೂಯಾರ್ಕ್ ಪೋಸ್ಟ್' ಪತ್ರಿಕೆ ವರದಿ ಮಾಡಿದೆ.

ಪರಿಶೀಲನೆ ನಡೆಸಿದಾಗ ವಿಜಯ್ ಕುಮಾರ್ ಬ್ಯಾಗಿನಲ್ಲಿ ಬೇಹುಗಾರಿಕೆ ಮತ್ತು ಅಮೆರಿಕಾ ಮಿಲಿಟರಿ ಶಸ್ತ್ರಾಸ್ತ್ರಗಳಿಗೆ ಸಂಬಂಧಪಟ್ಟ ನಕಾಶೆಗಳು ಮತ್ತು ಪುಸ್ತಕಗಳು ಪತ್ತೆಯಾಗಿವೆ. ಇದರಲ್ಲಿ ಜಿಹಾದ್ ಮತ್ತು ನಾಸ್ತಿಕವಾದದ ಕುರಿತ ಉಲ್ಲೇಖವಿರುವುದು ಪತ್ತೆಯಾಗಿವೆ.

ಅಲ್ಲದೆ ಬ್ಯಾಗಿನಲ್ಲಿ ಗೃಹನಿರ್ಮಿತ ಸ್ಫೋಟಕಗಳ ಅಂಶಗಳಿರುವುದು ಆರಂಭದಲ್ಲಿ ಪತ್ತೆಯಾಗಿತ್ತಾದರೂ, ನಂತರ ನಡೆಸಲಾದ ವಿಸ್ತೃತ ತಪಾಸಣೆಗಳು ಋಣಾತ್ಮಕ ಫಲಿತಾಂಶ ತೋರಿಸಿದ್ದವು.

ತಾನು ಇಸ್ಲಾಮಿಕ್ ವಿಚಾರಗೋಷ್ಠಿಗಾಗಿ ಹೌಸ್ಟನ್‌ನಲ್ಲಿದ್ದೇನೆ ಎಂದು ಬಂಧನದಲ್ಲಿರುವ ಕುಮಾರ್ ತಿಳಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ