ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ ಮಿಲಿಟರಿ ಜನರಲ್ ಅಳಿಯನ ಅಪಹರಣ! (Pakistan general | kidnapped | Lahore | son-in-law | Punjab)
Bookmark and Share Feedback Print
 
ಪ್ರವಾಹ ಮತ್ತು ಉಗ್ರಗಾಮಿಗಳ ಅಟ್ಟಹಾಸದಿಂದ ಪಾಕಿಸ್ತಾನ ತತ್ತರಿಸಿಹೋಗಿದ್ದು, ದೇಶದಲ್ಲಿ ಬಿಗಿ ಭದ್ರತೆ ಇದ್ದರೂ ಕೂಡ ಪಾಕಿಸ್ತಾನದ ಹಿರಿಯ ಜನರಲ್‌ವೊಬ್ಬರ ಅಳಿಯನನ್ನೇ ಅಪಹರಿಸಿರುವ ಘಟನೆ ಲಾಹೋರ್‌ನಲ್ಲಿ ನಡೆದಿದೆ.

'ಜನರಲ್ ತಾರಿಕ್ ಮಜಿದ್ ಅವರ ಅಳಿಯನ ಅಪಹರಣ ಪ್ರಕರಣದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ' ಎಂದು ಪಂಜಾಬ್ ಪ್ರಾಂತ್ಯದ ಕಾನೂನು ಸಚಿವ ರಾಣಾ ಸಾನಾವುಲ್ಲಾ ತಿಳಿಸಿದ್ದಾರೆ.

ಮಜಿದ್ ಅವರು ಮಿಲಿಟರಿಯ ಬೃಹತ್ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು. ಮತ್ತೊಂದೆಡೆ ಮಜಿದ್ ಅಳಿಯನನ್ನು ಅಪಹರಿಸಲಾಗಿತ್ತು. ಆದರೆ ಇದು ಜನವಿರೋಧಿ ಸರಕಾರದ ಧೋರಣೆಯಿಂದಾಗಿ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಬುಧವಾರ ರಾತ್ರಿ ಟ್ರೇಡರ್ಸ್ ಮಂಡಳಿಯ ಮುಖಂಡ, ತಾರಿಕ್ ಅಳಿಯ ಅಮಿರ್ ಮಲಿಕ್ ಅವರನ್ನು ಆರು ಅಥವಾ ಎಂಟು ಮಂದಿಯ ತಂಡವೊಂದು ಅಪಹರಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಮಲಿಕ್ ಪತ್ತೆಗಾಗಿ ಪೊಲೀಸ್ ಮತ್ತು ಭದ್ರತಾ ಪಡೆಗಳು ತೀವ್ರ ಶೋಧ ನಡೆಸುತ್ತಿವೆ ಎಂದು ತಿಳಿಸಿರುವ ಸಾನಾವುಲ್ಲಾ, ಆದರೆ ಈವರೆಗೂ ಅಪಹರಣಕಾರರು ಯಾರನ್ನೂ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ