ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೌದಿಯಲ್ಲಿ ಫತ್ವಾ ನೀಡಲೆಂದೇ ಟಿವಿ ಚಾನೆಲ್, ರೇಡಿಯೋ! (Saudi Arabia | fatwa | television channel | Muslim scholars)
Bookmark and Share Feedback Print
 
ಹಲವು ಮಂದಿಯಿಂದ ಫತ್ವಾದ ದುರುಪಯೋಗವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸೌದಿ ಅರೇಬಿಯಾ ಸರಕಾರವು, ಅದಕ್ಕೆಂದೇ ಪ್ರತ್ಯೇಕ ಟಿವಿ ಚಾನೆಲ್ ಮತ್ತು ರೇಡಿಯೋ ಕೇಂದ್ರವನ್ನು ತೆರೆಯಲಿದೆ.

ಹೊಸತಾಗಿ ಬರಲಿರುವ ಟಿವಿ ಚಾನೆಲ್ ಪ್ರಶ್ನೆ ಕೇಳುವ ಸೌದಿ ಅರೇಬಿಯಾ ಮತ್ತು ಹೊರಗಿನವರಿಗೆ ಸಂಬಂಧ ಕಲ್ಪಿಸಲಿದೆ. ಸಂಬಂಧಪಟ್ಟ ಅಧಿಕೃತ ಮುಸ್ಲಿಂ ಧಾರ್ಮಿಕ ಮುಖಂಡರು ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ಅದಕ್ಕಾಗಿ ವಿಶ್ವದಾದ್ಯಂತದಿಂದ ಕರೆ ಮಾಡಬಹುದಾಗಿದೆ. ಉಚಿತ ದೂರವಾಣಿ ಸಂಖ್ಯೆಯನ್ನೂ ಇದಕ್ಕೆ ಒದಗಿಸಲಾಗುತ್ತದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಸೌದಿ ರಾಜಧಾನಿ ರಿಯಾದ್‌ನಲ್ಲಿ ಈ ಟಿವಿ ಚಾನೆಲ್‌ನ ಪ್ರಧಾನ ಕಚೇರಿ ಕಾರ್ಯನಿರ್ವಹಿಸಲಿದೆ ಎಂದೂ ವರದಿಗಳು ಹೇಳಿವೆ.

ಅನಧಿಕೃತ ಧಾರ್ಮಿಕ ಮುಖಂಡರು ನಗಣ್ಯವೆನಿಸಿದ ವಿಚಾರಗಳಿಗೂ ಫತ್ವಾ ಹೊರಡಿಸುತ್ತಿರುವುದರನ್ನು ತಡೆಗಟ್ಟಲು ಸೌದಿ ಅರೇಬಿಯಾವು ಶತಯತ್ನ ನಡೆಸುತ್ತಿದ್ದು, ಅದರ ಭಾಗವಾಗಿ ಚಾನೆಲ್ ಹೊರ ತರುವ ಬಗ್ಗೆ ಸರಕಾರ ನಿರ್ಧರಿಸಿದೆ.

ಸಾರ್ವಜನಿಕ ಫತ್ವಾಗಳನ್ನು ಅಧಿಕೃತವಾಗಿ ನೇಮಿಸಲ್ಪಟ್ಟ ಧಾರ್ಮಿಕ ಮುಖಂಡರು ಮಾತ್ರ ಹೊರಡಿಸಬೇಕು ಎಂದು ಇದೇ ತಿಂಗಳ ಆರಂಭದಲ್ಲಿ ಸೌದಿ ದೊರೆ ಅಬ್ದುಲ್ಲಾ ಕಟ್ಟಾಜ್ಞೆ ವಿಧಿಸಿದ್ದರು.

ಧಾರ್ಮಿಕ ನೀತಿಗಳಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರುವ ಯೋಜನೆ ಹಾಕಿಕೊಂಡಿರುವ ಸಂಯುಕ್ತ ಸಂಸ್ಥಾನದ ಮೊದಲ ಮಹತ್ವದ ಹೆಜ್ಜೆ ಇದಾಗಿತ್ತು. ಅದರ ಬೆನ್ನಿಗೆ ಟಿವಿ ಚಾನೆಲ್ ಮತ್ತು ಆಕಾಶವಾಣಿ ಕೇಂದ್ರವನ್ನು ತೆರೆಯುವ ನಿರ್ಧಾರಕ್ಕೆ ಬರಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ