ಇರಾಕ್ ಯುದ್ಧ ಅಂತ್ಯವಾಗಿದ್ದು, ಅಮೆರಿಕದ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.
ಕಳೆದ ವಾರದ ಅವಧಿಯಲ್ಲಿ 50 ಸಾವಿರ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಮುಂಬರುವ ಮಾರ್ಚ್ ವೇಳೆಗೆ ಸಂಪೂರ್ಣ ಸೇನೆ ಅಮೆರಿಕೆಗೆ ಮರಳಲಿದೆ ಎಂದು ತಿಳಿಸಿದ್ದಾರೆ.
ಯುದ್ಧ ಮುಕ್ತಾಯವಾಗಿದ್ದರಿಂದ ಇತರ ಸ್ವತಂತ್ರ ರಾಷ್ಟ್ರಗಳಂತೆ ಇರಾಕ್ ಕಾರ್ಯನಿರ್ವಹಿಸಲಿದೆ.ಇರಾಕ್ ಸರಕಾರ ಅಗತ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಕ್ತಾಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.