ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೋಕೈನ್ ಸೇವನೆ:ಹಾಲಿವುಡ್ ನಟಿ ಪ್ಯಾರಿಸ್ ಹಿಲ್ಟನ್ ಬಂಧನ (Paris hilton | Marijuana smoke | Cocaine)
Bookmark and Share Feedback Print
 
ಕೋಕೈನ್ ಮಾದಕ ವಸ್ತು ಹೊಂದಿದ ಆರೋಪದ ಮೇಲೆ ಹಾಲಿವುಡ್‌ನ ಮಾದಕ ನಟಿ ಪ್ಯಾರಿಸ್ ಹಿಲ್ಟನ್‌ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ಯಾರಿಸ್ ಹಿಲ್ಟನ್ ಪ್ರಯಾಣಿಸುತ್ತಿದ್ದ ಕಪ್ಪು ಬಣ್ಣದ ಕ್ಯಾಡಿಲಾಕ್ ಕಾರಿನಲ್ಲಿ, ಹಿಲ್ಟನ್ ಹಾಗೂ ಅವಳ ಬಾಯ್‌ಫ್ರೆಂಡ್ ಕೋಕೈನ್ ಸೇವಿಸುತ್ತಿರುವುದು ಪತ್ತೆಯಾಗಿರುವುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸುತ್ತಿರುವುದರಿಂದ ಸುರಕ್ಷತಾ ದೃಷ್ಟಿಯಿಂದ ಪೊಲೀಸರು ನಟಿ ಪ್ಯಾರಿಸ್ ಹಿಲ್ಟನ್ ಅವರನ್ನು ಹೋಟೆಲೊಂದಕ್ಕೆ ಕರೆದುಕೊಂಡು ಹೋದರು ಎಂದು ಪೊಲೀಸ್ ಮುಖ್ಯಸ್ಥ ವಾಯ್ನೆ ಹೊಲ್‌ಮನ್ ತಿಳಿಸಿದ್ದಾರೆ.

29 ವರ್ಷ ವಯಸ್ಸಿನ ಹಾಲಿವುಡ್ ನಟಿ ಪ್ಯಾರಿಸ್ ಹಿಲ್ಟನ್, ಲಾಸ್‌ವೇಗಾಸ್‌ನ ನೈಟ್‌ಕ್ಲಬ್‌ನಲ್ಲಿ ಕೋಕೈನ್ ಸೇವಿಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ