ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಾವಿನ ಕದ ತಟ್ಟಿ, ಮರುಹುಟ್ಟು ಪಡೆದಿದ್ದೇನೆ: ಕ್ಯಾಸ್ಟ್ರೋ (Fidel Castro | Cuban | Mexico | to be dead | Raul,)
Bookmark and Share Feedback Print
 
ಕ್ಯೂಬಾದ ಮುಖಂಡ ಫಿಡೆಲ್ ಕ್ಯಾಸ್ಟ್ರೋ ಕೊನೆಗೂ ಸುಮಾರು ನಾಲ್ಕು ವರ್ಷಗಳ ನಂತರ ತಮ್ಮ ಆರೋಗ್ಯ ಸ್ಥಿತಿಯ ಗುಟ್ಟನ್ನು ಬಿಚ್ಚಿಟ್ಟಿದ್ದು, 'ತಾನು ಸಾವಿನ ದವಡೆವರೆಗೂ ಹೋಗಿದ್ದೆ. ಆದರೆ ಮತ್ತೆ ಪುನರ್‌ಜೀವನ ಪಡೆದಿದ್ದೇನೆ' ಎಂದು ತಿಳಿಸಿದ್ದಾರೆ.

ಅನಾರೋಗ್ಯದಿಂದ ಸಾವಿನ ಮನೆಯ ಕದ ತಟ್ಟಿದ್ದೆ. ಆದರೆ ಇದೀಗ ಮತ್ತೆ ಮರು ಹುಟ್ಟು ಪಡೆದಿದ್ದೇನೆ. ನನ್ನ ಅರೋಗ್ಯ ಎಲ್ಲಿಯವರೆಗೆ ಹೀಗೆ ಮುಂದುವರಿಯಲಿದೆ ಎಂಬುದು ಗೊತ್ತಿಲ್ಲ. ಇನ್ನಷ್ಟು ಕಾಲ ಬಾಳುತ್ತೇನೆ ಎಂಬ ವಿಶ್ವಾಸ ಇರುವುದಾಗಿ ಕ್ಯಾಸ್ಟ್ರೋ ಮೆಕ್ಸಿಕೋದ ಲಾ ಜೋರ್ನಾಡಾ ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕಮ್ಯೂನಿಷ್ಟ್ ದ್ವೀಪ ಪ್ರದೇಶವಾದ ಪುಟ್ಟ ಕ್ಯೂಬಾವನ್ನು ಸುಮಾರು 50 ವರ್ಷಗಳ ಕಾಲ ಆಳಿದ್ದ ಫಿಡೆಲ್ ಕ್ಯಾಸ್ಟ್ರೋ ತೀವ್ರ ಅನಾರೋಗ್ಯದಿಂದ 2006ರಲ್ಲಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದರು. ಈ ಸಂದರ್ಭದಲ್ಲಿ ಕ್ಯಾಸ್ಟ್ರೋ ಸಹೋದರ ರೌಲ್ ಕ್ಯಾಸ್ಟ್ರೋ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ತನ್ನ ತೀವ್ರ ಅನಾರೋಗ್ಯಕ್ಕೆ ಒಳಗಾದ ಸಮಯದಲ್ಲಿ ಹಲವು ಬಾರಿ ವೈದ್ಯರಲ್ಲಿ ಒಂದೋ ನನ್ನ ಜೀವಂತವಾಗಿ ಉಳಿಸಿ, ಇಲ್ಲ ಸಾಯಬೇಕು ಎಂದು ಕೇಳಿದ್ದೆ. ಅದೃಷ್ಟ ಅವೆಲ್ಲ ತೊಂದರೆಯಿಂದ ಬದುಕುಳಿದಿದ್ದೇನೆ ಎಂದು ಕ್ಯಾಸ್ಟ್ರೋ ಮೆಕ್ಸಿಕೋ ದೈನಿಕ್ಕೆ ತಿಳಿಸಿರುವುದಾಗಿ ಮಿಯಾಮಿ ಹೆರಾಲ್ಡ್ ವರದಿ ಹೇಳಿದೆ.

ವೈದ್ಯರ ಸಲಹೆ-ಸೂಚನೆಯನ್ನು ಚಾಚೂ ತಪ್ಪದೆ ಅನುಸರಿಸಿದ್ದೇನೆ. ವೈದ್ಯರ ಯಾವ ಸಲಹೆಯನ್ನೂ ಕಡೆಗಣಿಸಿಲ್ಲ. ಇದೀಗ ಆರೋಗ್ಯದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ