ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡಿ, ಪರಿಹಾರ ಸ್ವೀಕರಿಸ್ತೇವೆ: ವರದಿ (Pakistan | Indian aid | Pak media | UN | Kashmir | Indian Army)
Bookmark and Share Feedback Print
 
ಸಾಕಷ್ಟು ಕ್ಯಾತೆ ತೆಗೆದ ನಂತರ ನೆರೆ ಸಂತ್ರಸ್ತರಿಗಾಗಿ ನೆರೆಯ ಭಾರತ ನೀಡುವ ಪರಿಹಾರ ಹಣವನ್ನು ಸ್ವೀಕರಿಸುವುದಾಗಿ ಪಾಕಿಸ್ತಾನ ಹೇಳಿದ್ದರೂ ಕೂಡ, ಪಾಕ್ ಈವರೆಗೂ ಭಾರತದ ನೆರೆ ಪರಿಹಾರ ಹಣವನ್ನು ಸ್ವೀಕರಿಸಿಲ್ಲ ಎಂದು ಪಾಕ್‌ನ ಮಾಧ್ಯಮವೊಂದರ ವರದಿ ತಿಳಿಸಿದೆ.

'ಕಾಶ್ಮೀರಿಗಳಿಗೆ ಸ್ವಾಯತ್ತೆ ನೀಡುವ ಬಗ್ಗೆ ಭಾರತ ಪೂರ್ಣಪ್ರಮಾಣದಲ್ಲಿ ಹೇಳಿಕೆ ನೀಡುವವರೆಗೂ ನೆರೆಯ ಭಾರತದೊಂದಿಗೆ ಯಾವುದೇ ವಿಧದಲ್ಲಿಯೂ ಒಪ್ಪಂದ ಮಾಡಿಕೊಳ್ಳಲ್ಲ. ಅಲ್ಲದೇ ನೆರೆ ಪರಿಹಾರಕ್ಕೆ ನೀಡಿರುವ ಐದು ಮಿಲಿಯನ್ ಹಣವನ್ನೂ ಸ್ವೀಕರಿಸುವುದಿಲ್ಲ. ಅದನ್ನು ವಿಶ್ವಸಂಸ್ಥೆಯ ಮುಖಾಂತರವೇ ಭಾರತಕ್ಕೆ ಮರಳಿಸಲಾಗುವುದು ಎಂದು ಉರ್ದು ದೈನಿಕ ನಾವಾ ಐ ವಕ್ತ್ ತನ್ನ ಸಂಪಾದಕೀಯಲ್ಲಿ ಹೇಳಿದೆ.

ಕಾಶ್ಮೀರ ಜನರಿಗೆ ಸ್ವಾತಂತ್ರ್ಯ ನೀಡುವುದೇ ಪ್ರಮುಖವಾದದ್ದು ಎಂದು ಭಾರತ ಸರಕಾರಕ್ಕೆ ಮನವರಿಕೆಯಾಗಬೇಕಾಗಿದೆ. ಅಲ್ಲದೇ ಕಾಶ್ಮೀರ ವಿವಾದ ಪರಿಹಾರಕ್ಕೆ ರಾಜಕೀಯ ಪರಿಹಾರವೇ ಮದ್ದು ಎಂದು ಗೃಹ ಸಚಿವ ಪಿ.ಚಿದಂಬರಂ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆಂದು ಸಂಪಾದಕೀಯದಲ್ಲಿ ವಿವರಿಸಿದೆ.

ಹಾಗಾಗಿ ಕಾಶ್ಮೀರಿಗಳು ತಮ್ಮ ಅಂತಿಮ ಗುರಿ ಸಾಧಿಸುವವರೆಗೂ ನಡೆಸುವ ಹೋರಾಟಕ್ಕೆ ಪಾಕ್ ಬೆಂಬಲ ನಿರಂತರವಾಗಿ ಇರುತ್ತದೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಭಾರತ ಕಾಶ್ಮೀರ ಜನರಿಗೆ ಸ್ವಾಯತ್ತತೆ ನೀಡಿದ ನಂತರವೇ ಭಾರತದ ಜತೆ ಗೆಳೆತನ, ವ್ಯವಹಾರ ಎಂದು ಸಂಪಾದಕೀಯದಲ್ಲಿ ವಿವರಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ