ವಾಷಿಂಗ್ಟನ್, ಬುಧವಾರ, 1 ಸೆಪ್ಟೆಂಬರ್ 2010( 15:40 IST )
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್‌ಬ್ರೂಕ್ ಇತ್ತೀಚೆಗೆ ಅಫ್ಘಾನ್ ತಾಲಿಬಾನ್ ಮತ್ತು ಹಿಜಾಬ್ ಇ ಇಸ್ಲಾಮಿ ಮುಖಂಡರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆಂಬ ಮಾಧ್ಯಮಗಳ ವರದಿಯನ್ನು ಅಮೆರಿಕ ತಳ್ಳಿಹಾಕಿದೆ.
ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಅಮೆರಿಕ ಪಡೆಗಳನ್ನು ಹಿಂಪಡೆದ ನಂತರ ನ್ಯಾಷನಲ್ ಗವರ್ನ್‌ಮೆಂಟ್ ರಚಿಸುವ ನಿಟ್ಟಿನಲ್ಲಿ ರಿಚರ್ಡ್ ಉಗ್ರರ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆಂದು ಮಾಧ್ಯಮದ ವರದಿಯೊಂದು ತಿಳಿಸಿತ್ತು.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ವಿಶೇಷ ಪ್ರತಿನಿಧಿಯಾಗಿರುವ ರಿಚರ್ಡ್ ತಾಲಿಬಾನ್‌ನ ಯಾವುದೇ ಮುಖಂಡರನ್ನು ಭೇಟಿಯಾಗಿಲ್ಲ ಎಂದು ಅಮೆರಿಕ ತಿಳಿಸಿದೆ.
ಆಗೋಸ್ಟ್ 17 ಮತ್ತು 21ರಂದು ಹಾಲೆಂಡ್‌ನ ಮೈಕೆಲ್ ಸಿಂಬಾಲ್ ಮತ್ತು ಬ್ರಿಟನ್‌ನ ಜಾರ್ಜ್ ಡಾಕ್ಸಿನ್ ಹಾಗೂ ಹಾಲ್‌ಬ್ರೂಕ್ ಅವರು ಜಮಾತ್ ಉದ್ ದಾವಾ ಮತ್ತು ಸುನ್ನಾ ಅಲಿಯಾಸ್ ಸಲಾಫಿ ತಾಲಿಬಾನ್ ಮುಖಂಡರ ಜೊತೆ ಇಸ್ಲಾಮಾಬಾದ್ ಮತ್ತು ಪೇಶಾವರದಲ್ಲಿ ಚರ್ಚೆ ನಡೆಸಿದ್ದರು ಎಂಬ ವರದಿಯ ಹಿನ್ನೆಲೆಯಲ್ಲಿ ಅಮೆರಿಕದ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಈ ರೀತಿ ಪ್ರತಿಕ್ರಿಯೆ ನೀಡಿದೆ.