ಭಾರತೀಯನಿಗೆ ಪ್ರಶಸ್ತಿ
ವಾಷಿಂಗ್ಟನ್: ಭಾರತದ ಪಲ್ಲವ ಬಾಗ್ಲಾ ಎಂಬವರು ಅಮೆರಿಕನ್ ಜಿಯೋಫಿಸಿಕಲ್ ಯೂನಿಯನ್ ನೀಡುವ ಡೇವಿಡ್ ಪರ್ಲ್ಮನ್ ಪ್ರಶಸ್ತಿಯನ್ನು ವೈಜ್ಞಾನಿಕ ಪತ್ರಿಕೋದ್ಯಮಕ್ಕಾಗಿ ಪಡೆದುಕೊಂಡಿದ್ದಾರೆ. ಹಿಮಾಲಯ ನೀರ್ಗಲ್ಲುಗಳು ಹವಾಮಾನ ವೈಪರೀತ್ಯದಿಂದ ಕರಗುತ್ತಿರುವ ಕುರಿತು ಪಲ್ಲವ ಗಮನಾರ್ಹ ಲೇಖನ ಬರೆದಿದ್ದರು.