ಕ್ಯಾಲಿಫೋರ್ನಿಯಾ, ಬುಧವಾರ, 1 ಸೆಪ್ಟೆಂಬರ್ 2010( 20:25 IST )
ಗಲ್ಲುಶಿಕ್ಷೆಯಿಂದ ಮುಕ್ತನಾಗಿದ್ದ 70 ವರ್ಷದ ವ್ಯಕ್ತಿಯೊಬ್ಬ ಜೈಲಿನ ಕೊಠಡಿಯಲ್ಲೇ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಜಾರ್ಜ್ ಸ್ಮಿತ್ ಎಂಬಾತ ಕೊಠಡಿಯ ಸುತ್ತ ಹೊದಿಸಿದ್ದ ಬಟ್ಟೆಯನ್ನೇ ಬಳಸಿ ನೇಣು ಬಿಗಿದುಕೊಂಡಿರುವುದಾಗಿ ಸ್ಯಾನ್‌ಕ್ವೆಂಟಿನ್ ಕಾರಾಗೃಹ ವಕ್ತಾರ ಸ್ಯಾಂ ರಾಬಿನ್‌ಸನ್ ತಿಳಿಸಿದ್ದಾರೆ.
1988ರಲ್ಲಿ ಮಹಿಳೆಯ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಜಾರ್ಜ್‌ಗೆ 20 ವರ್ಷದ ನಂತರ ಆಗೋಸ್ಟ್ 23ರಂದು ಮರಣದಂಡನೆ ಶಿಕ್ಷೆಯನ್ನು ಕೋರ್ಟ್ ರದ್ದು ಪಡಿಸಿತ್ತು. ಜಾರ್ಜ್ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಗಲ್ಲುಶಿಕ್ಷೆಯನ್ನು ರದ್ದುಪಡಿಸಿದ್ದರು.
ಆದರೆ ಜಾರ್ಜ್‌ಗೆ ಶಿಕ್ಷೆ ರದ್ದಾದ ವಿಷಯ ತಿಳಿದಿತ್ತೆ ಅಥವಾ ಇಲ್ಲವೇ ಎಂಬುದು ಬಹಿರಂಗವಾಗಿಲ್ಲ. ಆದರೆ ಜಾರ್ಜ್ ನೇಣಿಗೆ ಶರಣಾಗಿರುವುದಾಗಿ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.