ಜೈಲಿನಲ್ಲಿ ಮಹಿಳಾ ಕೈದಿಗಳಿಬ್ಬರು ಲೈಂಗಿಕ ಚೆಲ್ಲಾಟ ನಡೆಸುತ್ತಿದ್ದ ಸಿಸಿಟಿವಿ ವೀಡಿಯೋವನ್ನು ವೀಕ್ಷಿಸಿದ ಆರೋಪ ಹೊತ್ತ ನಾಲ್ವರು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್‌ಸಿಎಂಪಿ) ಅಧಿಕಾರಿಗಳು ಹಾಗೂ ಮೂವರು ಕಾರಾಗೃಹ ಕೆಲಸಗಾರರಲ್ಲಿ ಆರು ಮಂದಿಯನ್ನು ವೇತನ ರಹಿತವಾಗಿ ಕೆನಡಾ ಅಮಾನತುಗೊಳಿಸಿದೆ.
ಬ್ರಿಟೀಷ್ ಕೊಲಂಬಿಯಾದ ಕಾಲ್ಮೂಪ್ಸ್ ಪ್ರಾದೇಶಿಕ ಮಾರ್ಪಾಡು ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಅಧಿಕಾರಿಗಳ ವಿರುದ್ಧ ಹೆಚ್ಚಿನ ಶಿಸ್ತು ಕ್ರಮವನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಸುಮಾರು ಏಳು ನಿಮಿಷಗಳ ಅಶ್ಲೀಲ ವೀಡಿಯೋವನ್ನು ಏಳು ಮಂದಿ ಅಕ್ರಮವಾಗಿ ವೀಕ್ಷಿಸಿದ್ದರು.
20 ವರ್ಷಗಳಿಂದ ಪೊಲೀಸ್ ಮೇಲ್ವಿಚಾರಣಾ ಅಧಿಕಾರಿಯಾಗಿರುವ ಓರ್ವ, ಒಂದರಿಂದ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇಬ್ಬರು ಸೇರಿದಂತೆ ಘಟನೆ ಬೆಳಕಿಗೆ ಬಂದ ನಂತರ ನಡೆಸಲಾದ ಪ್ರಾಥಮಿಕ ತನಿಖೆಯ ನಂತರ ಅವರನ್ನು ಅಮಾನತುಗೊಳಿಸಲು ಇಲಾಖೆ ನಿರ್ಧರಿಸಿದೆ.
ಆದರೆ ನಾಲ್ಕನೇ ಅಧಿಕಾರಿಯ ಕುರಿತು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ತನಿಖೆ ಮುಕ್ತಾಯಗೊಂಡ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರ್‌ಸಿಎಂಪಿ ಇನ್ಸ್‌ಪೆಕ್ಟರ್ ಟಿಮ್ ಶೀಲ್ಡ್ಸ್ ತಿಳಿಸಿದ್ದಾರೆ.
ಆರ್‌ಸಿಎಂಪಿ ತನಿಖೆಯಿಂದ ಹೊರ ಬರುವ ಫಲಿತಾಂಶಗಳು ಮತ್ತು ಅವರ ವಿರುದ್ಧ ಕೈಗೊಳ್ಳಲಾಗುವ ಕ್ರಮಗಳ ಕುರಿತು ನಗರವು ಕುತೂಹಲದಿಂದ ಕಾಯುತ್ತಿದೆ ಎಂದು ನಗರದ ಮುಖ್ಯ ಆಡಳಿತಾಧಿಕಾರಿ ರಾಂಡಿ ಡೀಲ್ ಹೇಳಿಕೆ ನೀಡಿದ್ದಾರೆ.
ಅಮಾನತುಗೊಂಡ ಕಾರಾಗೃಹ ಕೆಲಸಗಾರರ ಒಕ್ಕೂಟದ ಅಧ್ಯಕ್ಷೆ ಗೇಯ್ಲ್ ನೀಲ್ಸನ್ ಕೂಡ ಪ್ರತಿಕ್ರಿಯೆ ನೀಡಿದ್ದು, ಈ ಕುರಿತು ವೈಯಕ್ತಿಕವಾಗಿ ಹೆಚ್ಚಿನ ಗಮನ ಹರಿಸುತ್ತಿದ್ದೇನೆ ಎಂದಿದ್ದಾರೆ.