ಚೀನಾದಲ್ಲಿ ಇತ್ತೀಚೆಗೆ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗತೊಡಗಿದ್ದು, ಗುರುವಾರವೂ ಕೂಡ ಸುಮಾರು 120 ಕಿ.ಮೀಟರ್‌ವರೆಗೆ ಸಾವಿರಾರು ಕಾರ್ಗೋ ಟ್ರಕ್ಸ್‌ಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿರುವುದಾಗಿ ವರದಿಯೊಂದು ತಿಳಿಸಿದೆ.
ಬೀಜಿಂಗ್ ಅನ್ನು ಸಂಪರ್ಕಿಸುವ ಮೊಂಗೋಲಿಯಾದ ಪ್ರಮುಖ ಹೈವೇಯಲ್ಲಿ ಸಾವಿರಾರು ಕಾರ್ಗೋ ಟ್ರಕ್ಸ್‌ಗಳು ನಿಧಾನಗತಿಯಲ್ಲಿ ಸಾಗುತ್ತಿರುವ ದೃಶ್ಯವನ್ನು ಸ್ಟೇಟ್ ಟೆಲಿವಿಷನ್ ಬಿತ್ತರಿಸಿದೆ.
ಇತ್ತೀಚೆಗಷ್ಟೇ ಚೀನಾದಲ್ಲಿ ಎರಡು ಬಾರಿ ಟ್ರಾಫಿಕ್ ಜಾಮ್ ಆಗಿದ್ದಕ್ಕೆ ಸಾಕ್ಷಿಯಾಗಿತ್ತು. ಇದೀಗ ಗುರುವಾರವೂ ಕೂಡ ಸುಮಾರು ಹತ್ತು ಸಾವಿರ ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಇಕ್ಕಟ್ಟಿನ ಪರಿಸ್ಥಿತಿ ಉಂಟಾಗಿತ್ತು. ಆದರೆ ಮಧ್ಯಾಹ್ನದ ನಂತರ ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿದಿತ್ತು ಎಂದು ಸಿಸಿಟಿವಿ ವರದಿಗಾರನೊಬ್ಬ ತಿಳಿಸಿದ್ದಾನೆ.