ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲೇಖಕಿಯ ಗುಪ್ತಾಂಗದ ಚಿತ್ರ ಸೆರೆ ಹಿಡಿದ ವೈದ್ಯರಿಗೆ ದಂಡ! (Court | Author | Ex Journalist | Police | Nacked Photo)
Bookmark and Share Feedback Print
 
ಶಸ್ತ್ರ ಚಿಕಿತ್ಸೆ ವೇಳೆ ಮರೆಗುಳಿ ವೈದ್ಯರು ಹೊಟ್ಟೆಯ ಒಳಗೆ ಕತ್ತರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಬಿಡುವುದನ್ನು ಕೇಳಿದ್ದೀರಿ. ಆದರೆ ಈ ವೈದ್ಯ ಮಹಾಶಯರಿಬ್ಬರು ಶಸ್ತ್ರಚಿಕಿತ್ಸೆಗೂ ಮುನ್ನ ಮಹಿಳೆಯ ಗುಪ್ತಾಂಗಗಳ ಚಿತ್ರವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದದ್ದಕ್ಕೆ ಹೈಕೋರ್ಟ್ ದಂಡ ವಿಧಿಸಿದ ಅಪರೂಪದ ಘಟನೆ ವರದಿಯಾಗಿದೆ.

ಮಲೇಶ್ಯಾದ 50ರ ಹರೆಯದ ಲೇಖಕಿ, ಮಾಜಿ ಪತ್ರಕರ್ತೆ ಲೀ ಈವ್ ಫೋ ಅವರ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ವೈದ್ಯರಾದ ಲಿಮ್ ಟೆಕ್‌ಮೌ ಮತ್ತು ಲೋ ಗುವಾನ್ ಲೈ ಆಕೆಯ ಗುಪ್ತಾಂಗಗಳ ಚಿತ್ರ ಸೆರೆ ಹಿಡಿದಿದ್ದರು.

ಈ ವಿಷಯ ಅರಿತ ಲೇಖಕಿ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಲೀಗೆ ಪರಿಹಾರವಾಗಿ 7,994 ಅಮೆರಿಕನ್ ಡಾಲರ್ ನೀಡುವಂತೆ ತಾಕೀತು ಮಾಡಿದೆ. ವೈದ್ಯರಿಂದ ವಶಪಡಿಸಿಕೊಂಡ ಡಿಜಿಟಲ್ ಕ್ಯಾಮೆರಾ ಮೆಮೋರಿ ಕಾರ್ಡ್‌ನಲ್ಲಿದ್ದ ಚಿತ್ರಗಳನ್ನು ಕೋರ್ಟ್‌ನಲ್ಲಿ ವಾದಿ-ಪ್ರತಿವಾದಿಗಳ ಮುಂದೆ ನಾಶಪಡಿಸಲಾಯಿತು ಎಂದು ವರದಿಯೊಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ