ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ ನದಿಗೆ ಭಾರತ ನೀರು ಬಿಟ್ಟಿದ್ದೇ ಪ್ರವಾಹಕ್ಕೆ ಕಾರಣ: ಸಯೀದ್ (Hafiz Mohd Saeed | Mumbai attacks | flood | India | Pak rivers)
Bookmark and Share Feedback Print
 
ಪಾಕಿಸ್ತಾನದಲ್ಲಿ ಪ್ರವಾಹ ಸ್ಥಿತಿ ಬರಲು ನೆರೆಯ ಭಾರತ ಪಾಕಿಸ್ತಾನದ ನದಿಗಳಿಗೆ ನೀರನ್ನು ಬಿಟ್ಟಿರುವುದೇ ಪ್ರಮುಖ ಕಾರಣ ಎಂದು ಜೆಯುಡಿ ವರಿಷ್ಠ, ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಮೊಹಮ್ಮದ್ ಸಯೀದ್ ಆರೋಪಿಸಿದ್ದಾರೆ.

ಆಕ್ರಮಿತ ಕಾಶ್ಮೀರದಲ್ಲಿ ಭಾರತ ದುಷ್ಕೃತ್ಯಗಳನ್ನು ಎಸಗುತ್ತಿದ್ದರೂ ಕೂಡ ಪಾಕಿಸ್ತಾನದ ಆಡಳಿತಗಾರರು ಬಾಯ್ಬಿಡದೆ ಮೌನಕ್ಕೆ ಶರಣಾಗಿದ್ದಾರೆ. ಅದೇ ರೀತಿ ಪಾಕಿಸ್ತಾನದ ನದಿಗಳಿಗೆ ಡ್ಯಾಂ ಕಟ್ಟುವ ಕಾರ್ಯದಲ್ಲಿ ಭಾರತ ನಿರತವಾಗಿದೆ ಎಂದು ಸಯೀದ್ ದೂರಿದ್ದಾರೆ.

ದೇಶದಲ್ಲಿ ಸಂಭವಿಸಿರುವ ಪ್ರವಾಹ ಘಟನೆಯನ್ನು ನಾವು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಇದು ಪಾಕ್ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಪ್ರವಾಹ ಸ್ಥಿತಿ ಇದಾಗಿದೆ. ಭಾರತ ಪಾಕಿಸ್ತಾನದ ನದಿಗಳಿಗೆ ಏಕಾಏಕಿ ನೀರು ಬಿಟ್ಟಿದ್ದರ ಪರಿಣಾಮ ಪ್ರವಾಹಕ್ಕೆ ಕಾರಣವಾಗಿದೆ ಎಂದು ಜೆಯುಡಿ ಹೆಡ್‌ಕ್ವಾರ್ಟ್‌ರ್ಸ್‌ನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಆರೋಪಿಸಿದ್ದಾರೆ.

ಪಾಕಿಸ್ತಾನದ ನದಿಗಳಿಗೆ ಅಣೆಕಟ್ಟು ಕಟ್ಟುತ್ತಿರುವ ಭಾರತದ ಕೆಲಸವನ್ನು ಪಾಕಿಸ್ತಾನ ನಿಲ್ಲಿಸಬೇಕು. ಅಷ್ಟೇ ಅಲ್ಲ ಪಾಕಿಸ್ತಾನ ಸುರಕ್ಷಿತವಾಗಿರಬೇಕಾದರೆ ಕಾಶ್ಮೀರವನ್ನು ಸ್ವತಂತ್ರಗೊಳಿಸುವುದೇ ಅಂತಿಮವಾದ ಅವಕಾಶವಾಗಿದೆ ಎಂದು ಸಯೀದ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ತಲೆದೋರಿದ ನೆರೆಗೆ ನೈಜ ಕಾರಣ ಏನು ಎಂಬುದನ್ನು ಪಾಕ್ ಜನರು ಮನಗಾಣಬೇಕು ಎಂದು ನಿಷೇಧಿತ ಲಷ್ಕರ್ ಇ ತೊಯ್ಬಾದ ಸ್ಥಾಪಕನಾಗಿರುವ ಸಯೀದ್ ಸಲಹೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ