ಮೆಕ್ಸಿಕೋ ನಗರ, ಮಂಗಳವಾರ, 7 ಸೆಪ್ಟೆಂಬರ್ 2010( 15:52 IST )
ಕಾನೂನು ಹೋರಾಟದ ನಂತರ ಸಲಿಂಗಿಗಳ ಮದುವೆ ಅಪರಾಧವಲ್ಲ ಎಂದು ಕೋರ್ಟ್ ತೀರ್ಪು ನೀಡಿದ ನಂತರ ಇದೀಗ ಸುಮಾರು 400 ಮಂದಿ ಸಲಿಂಗಿಗಳ ಮದುವೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 398 ಸಲಿಂಗಿ ಜೋಡಿಗಳ ಮದುವೆ ನೋಂದಣಿಯಾಗಿದ್ದು, ಇದರಲ್ಲಿ ಶೇ.53ರಷ್ಟು ಪುರುಷರು ಮತ್ತು ಶೇ.47ರಷ್ಟು ಮಹಿಳೆಯರು ಸೇರಿದ್ದಾರೆ ಎಂದು ಮೆಕ್ಸಿಕೋ ಸರಕಾರದ ಅಧಿಕಾರಿಗಳು ವಿವರಿಸಿದ್ದಾರೆ.
ಕಳೆದ ಆರು ವಾರಗಳಲ್ಲಿ 42 ವಿದೇಶಿಯರು ಮೆಕ್ಸಿಕನ್‌ನಲ್ಲಿರುವ ಯುರೋಪಿಯನ್‌ರ ಜೊತೆ, ದಕ್ಷಿಣ ಅಮೆರಿಕ, ಉತ್ತರ ಅಮೆರಿಕ ಸೇರಿದಂತೆ ಮೆಕ್ಸಿಕೋ ಸಲಿಂಗಿ ಪ್ರಜೆಗಳ ಜೊತೆ ವಿವಾಹ ಮಾಡಿಕೊಂಡಿದ್ದರು. ಇವರಲ್ಲಿ ಹೆಚ್ಚಿನವರು 30ರಿಂದ 40ರ ಹರೆಯದವರಾಗಿದ್ದಾರೆ. ಇದರಲ್ಲಿ ಮತ್ತೊಂದು ವಿಶೇಷತೆ ಏನಂದ್ರೆ, ನಾಲ್ಕು ಜೋಡಿಗಳ ವಯಸ್ಸು 70ರಿಂದ 90 ಆಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.