ಇಂಗ್ಲೆಂಡ್ ಸಂಸತ್ ಸದಸ್ಯರೊಬ್ಬರ ಪತ್ನಿ ವೇಶ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಧ್ಯಮವೊಂದರ ವರದಿ ಬಹಿರಂಗಗೊಳಿಸಿದ್ದು, ಇದು ಆಕೆಯ ಪತಿ ಸಂಸದ ಆಘಾತಗೊಂಡಿದ್ದು ಇದೊಂದು ಸಹಿಸಲಾಗದ ಆಘಾತ ಎಂದು ಹೇಳಿದ್ದಾರೆ.
ಸಂಡೆ ಮಿರರ್ ಈ ಸುದ್ದಿಯನ್ನು ಬಟಾಬಯಲು ಮಾಡಿದ್ದು, ಸಂಸದ ಮೈಕ್ ವೆದರ್ಲಿ ಅವರ ಬ್ರೆಜಿಲ್ ಮೂಲದ ಪತ್ನಿ 39 ವರ್ಷದ ಕಾರ್ಲಾ ವೇಶ್ಯಾವೃತ್ತಿಯಲ್ಲಿ ತೊಡಗಿದ್ದಾರೆ ಎಂದು ವರದಿ ಮಾಡಿದೆ. ಕಾರ್ಲಾ ಅವರು ಕಾಂಡೋಮ್ ರಹಿತ ಮುಖರತಿ ಹಾಗೂ ಕಾಂಡೋಮ್ ಸಹಿತ ಲೈಂಗಿಕ ಕ್ರಿಯೆಗೆ 70 ಪೌಂಡ್ಸ್ ಪಡೆದು ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಈ ಸುದ್ದಿ ಬಹಿರಂಗಗೊಂಡಿರುವುದು ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರಿಗೆ ತೀವ್ರ ಮುಜುಗರ ಉಂಟು ಮಾಡಲಿದೆ ಎಂದು ನಂಬಲಾಗಿದೆ. 39ರ ಹರೆಯದ ಕಾರ್ಲಾ ಮೂರು ಕೊಳಕು ವೇಶ್ಯಾಗೃಹದಲ್ಲಿ ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತಿದ್ದಿರುವುದಾಗಿ ವರದಿ ಹೇಳಿದೆ.
ಸುಮಾರು ಹತ್ತು ವರ್ಷಗಳ ಹಿಂದೆ ವೆದರ್ಲಿ ಅವರು ರಿಯೋ ಡೆ ಜನೆರಿಯೋಗೆ ತೆರಳಿದ್ದ ಸಂದರ್ಭದಲ್ಲಿ ಕಾರ್ಲಾಳನ್ನು ಭೇಟಿಯಾಗಿದ್ದರು.ಆ ಸಂದರ್ಭದಲ್ಲಿಯೇ ಕಾರ್ಲಾ ವೇಶ್ಯಾವೃತ್ತಿಯಲ್ಲಿ ತೊಡಗಿದ್ದಳು ಎಂದು ಮೂಲವೊಂದು ತಿಳಿಸಿದೆ. ಹೀಗೆ ವೆದರ್ಲಿ-ಕಾರ್ಲಾ ಪರಿಚಯ ಸ್ನೇಹಕ್ಕೆ ತಿರುಗಿತ್ತು.
ನಂತರ ವೆದರ್ಲಿ ಕಾರ್ಲಾ ಜೊತೆಯೇ ಬ್ರಿಟನ್ಗೆ ತೆರಳಿ, 2003ರಲ್ಲಿ ಬ್ರಿಗ್ಟೋನ್ನಲ್ಲಿ ವಿವಾಹವಾಗಿದ್ದರು. ಕುತೂಹಲದ ವಿಷಯ ಏನಂದ್ರೆ ಮದುವೆ ಪ್ರಮಾಣ ಪತ್ರದಲ್ಲಿ ಕಾರ್ಲಾ ಅವರ ವೃತ್ತಿ ಗೃಹಿಣಿ ಎಂದು ನಮೂದಿಸಲಾಗಿತ್ತು.ಏತನ್ಮಧ್ಯೆ ವೆದರ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಆಗ ಕಾರ್ಲಾ ಮತ್ತೆ ವೇಶ್ಯಾವಾಟಿಕೆಗೆ ಕಾಲಿಟ್ಟಿರುವುದಾಗಿ ವರದಿ ವಿವರಿಸಿದೆ.