ಕಾಮುಕ ತಂದೆಯೊಬ್ಬ ತನ್ನ 13ರ ಹರೆಯದ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿ ಒಂದು ವರ್ಷದವರೆಗೆ ಚಿಕ್ಕ ಕೋಣೆಯೊಂದರಲ್ಲಿ ಕೂಡಿ ಹಾಕಿರುವ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ.
ಜೆಫ್ರಿ ಯಾರ್ಕ್ ಎಂಬ ಕಾಮುಕ ತನ್ನ ಹೆಂಡತಿ ಹಾಗೂ ಏಳು ಮಕ್ಕಳನ್ನು ಯಾರ ಜೊತೆಯೂ ಬೆರೆಯದಂತೆ ದಿಗ್ಬಂಧನದಲ್ಲಿ ಇರಿಸಿದ್ದ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಗಂಡನ ಕಾಮುಕತನ ಬಗ್ಗೆ ಪತ್ನಿ ತನಿಖಾಧಿಕಾರಿಗಳಿಗೆ ವಿವರಣೆ ನೀಡಿದ್ದಳು. ಏಳು ಮಕ್ಕಳಲ್ಲಿ ಇಬ್ಬರು ಗಂಡು ಹಾಗೂ ಐದು ಹೆಣ್ಣು ಮಕ್ಕಳು ಇದ್ದು, ತನಗೆ ಗಂಡನಿಂದ ಬಿಡುಗಡೆಬೇಕಾಗಿದೆ ಎಂದು ಕೋರಿಕೊಂಡಿದ್ದಾಳೆ ಎಂದು ವರದಿ ಹೇಳಿದೆ.
ಮಗಳ ಮೇಲೆ ಸತತವಾಗಿ ಅತ್ಯಾಚಾರ ನಡೆಸುತ್ತಿದ್ದ ಯಾರ್ಕ್, ಮಗಳನ್ನು ವಾರ್ಡ್ರೋಬ್ಗಿಂತಲೂ ಚಿಕ್ಕದಾದ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದ. ಆಕೆಗೆ ಕೇವಲ ಶೌಚಾಲಯಕ್ಕೆ ತೆರಳಲು, ಆಹಾರ ಮತ್ತು ಬಟ್ಟೆ ಬದಲಿಸಲು ಮಾತ್ರ ಅವಕಾಶ ನೀಡಲಾಗಿತ್ತು ಎಂದು ವರದಿ ವಿವರಿಸಿದೆ.
ಓಹಿಯೋದ ಮಾಡಿಸನ್ ಟೌನ್ಶಿಪ್ನಲ್ಲಿ ವಾಸವಾಗಿರುವ ಯಾರ್ಕ್ ವಿರುದ್ಧ ಆತನ ಪತ್ನಿಯೇ ಪೊಲೀಸರಿಗೆ ತಿಳಿಸಿದ್ದಾಳೆ. ಈಗ ಪೊಲೀಸರ ಬಂಧನದಲ್ಲಿರುವ ಯಾರ್ಕ್ ಮೇಲೆ 19 ವಿವಿಧ ಪ್ರಕರಣ ದಾಖಲಿಸಲಾಗಿದೆ ಎಂದು ಡೈಲಿ ಮೇಲ್ ವರದಿ ಹೇಳಿದೆ.