ಇಸ್ಲಾಮಾಬಾದ್, ಗುರುವಾರ, 9 ಸೆಪ್ಟೆಂಬರ್ 2010( 19:58 IST )
ಮಾರ್ಚ್ ತಿಂಗಳಿನಲ್ಲಿ ಪಾಕಿಸ್ತಾನದ ವಾಯುವ್ಯ ಪ್ರದೇಶದಲ್ಲಿ ಉಗ್ರರು ಅಪಹರಿಸಿದ್ದ ಬ್ರಿಟನ್ ಪತ್ರಕರ್ತನನ್ನು ಬಿಡುಗಡೆಗೊಳಿಸಿರುವುದಾಗಿ ಪಾಕ್‌ನಲ್ಲಿರುವ ಬ್ರಿಟನ್ ರಾಯಭಾರ ಕಚೇರಿ ಗುರುವಾರ ತಿಳಿಸಿದೆ.
ಪಾಕಿಸ್ತಾನ ಪ್ರಜೆಯಾಗಿದ್ದ ಪತ್ರಕರ್ತ ಅಸಾದ್ ಖುರೇಷಿ ಬ್ರಿಟನ್‌ನ ಚಾನೆಲ್ 4ಟಿವಿಗೆ ಉಗ್ರರ ಕುರಿತು ಸಿನಿಮಾ ಮಾಡಲು ತಯಾರಿ ನಡೆಸಿದ್ದರು. ಆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬುಡಕಟ್ಟು ಪ್ರದೇಶದೊಳಕ್ಕೆ ಪ್ರವೇಶಿಸಿದಾಗ ಉಗ್ರರು ಖುರೇಷಿಯನ್ನು ಅಪಹರಿಸಿದ್ದರು.
ಆದರೆ ಖುರೇಷಿ ಬಿಡುಗಡೆಗೊಂಡಿರುವುದಾಗಿ ಮಾತ್ರ ರಾಯಭಾರ ಕಚೇರಿ ತಿಳಿಸಿದೆ ವಿನಃ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಖುರೇಷಿ ಪಾಕಿಸ್ತಾನದ ಗುಪ್ತಚರ ಇಲಾಖೆಯ ಇಬ್ಬರು ಮಾಜಿ ಅಧಿಕಾರಿಗಳೊಂದಿಗೆ ಪ್ರಯಾಣ ಬೆಳೆಸಿದ್ದರು. ಇದರಲ್ಲಿ ಅಧಿಕಾರಿ ಖಾಲಿದ್ ಖ್ವಾಜಾ ಅವರನ್ನು ಏಪ್ರಿಲ್‌ನಲ್ಲಿ ಹತ್ಯೆಗೈದಿದ್ದರು. ಮತ್ತೊಬ್ಬ ಅಧಿಕಾರಿ ಅಮಿರ್ ಟಾರಾರ್ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭಿಸಿಲ್ಲ.