ವಾಷಿಂಗ್ಟನ್, ಶುಕ್ರವಾರ, 10 ಸೆಪ್ಟೆಂಬರ್ 2010( 19:08 IST )
ಪಾಕಿಸ್ತಾನ ಮಿಲಿಟರಿ ಉಗ್ರಗಾಮಿ ಸಂಘಟನೆಗಳಿಗೆ ಬೆಂಬಲ ನೀಡುವುದನ್ನೂ ಈಗಲೂ ಮುಂದುವರಿಸಿದೆ ಎಂದು ಅಮೆರಿಕದ ಖ್ಯಾತ ಚಿಂತಕರೊಬ್ಬರು ಆರೋಪಿಸಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದಾದ್ಯಂತ ಸ್ಫೋಟಗಳು ನಿರಂತರವಾಗಿ ನಡೆಯುತ್ತಿದೆ. ಹಾಗಾಗಿ ಪಾಕಿಸ್ತಾನ ಈಗಲೂ ತಾಲಿಬಾನ್ ಉಗ್ರರನ್ನು ಬೆಂಬಲಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಅಷ್ಟೇ ಅಲ್ಲ ವಿಕಿಲೀಕ್ಸ್ ದಾಖಲೆಯಿಂದಲೂ ಈ ಅಂಶ ಬಯಲಾಗಿದೆ ಎಂದು ಚಿಂತಕ ಗಿಲ್ಲೆಸ್ ಡೋರ್ರೊನ್ಸೋರೋ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಿಂದ ವಾಪಸಾದ ಅವರು ಪಾಕಿಸ್ತಾನದ ಸ್ಥಿತಿಗತಿ ಕುರಿತು ವಿವರಿಸಿದ ಅವರು, ತಾಲಿಬಾನ್ ಈಗಲೂ ಪಾಕಿಸ್ತಾನಿ ಮಿಲಿಟರಿ ಜತೆ ತನ್ನ ಸಂಬಂಧವನ್ನು ಮುಂದುವರಿಸಿದೆ ಎಂದು ದೂರಿದರು.