ಜಾಗತಿಕ ದಿಬ್ಬಂಧನ ಹೇರುವ ಎಚ್ಚರಿಕೆ ನೀಡಿದರೂ, ವಿಶ್ವಸಂಸ್ಥೆಯ ವಿರೋಧದ ನಡುವೆಯೂ ಇರಾನ್ ಅಣ್ವಸ್ತ್ರ ತಯಾರಿಕೆ ಮತ್ತು ಅಣ್ವಸ್ತ್ರ ಘಟಕಗಳ ನಿರ್ಮಾಣ ಕಾರ್ಯ ಮುಂದುವರಿಸಿದೆ.
ಇರಾನ್ ಜಾಗತಿಕ ವಿರೋಧದ ನಡುವೆಯೂ ಭೂಗರ್ಭದಲ್ಲಿ ರಹಸ್ಯ ಅಣ್ವಸ್ತ್ರ ಘಟಕವನ್ನು ನಿರ್ಮಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ. 311 ಎಂಬ ರಹಸ್ಯ ಸಂಖ್ಯೆಯಿಂದ ಹೆಸರಿಸಲಾದ ಸ್ಥಳದಲ್ಲಿ ಭೂಮಿಯಿಂದ 200 ಮೀಟರ್ ಆಳದಲ್ಲಿ ಇರಾನ್ ಈ ಘಟಕ ನಿರ್ಮಾಣ ಕಾರ್ಯ ಆರಂಭಿಸಿದೆ.
ಅಬ್ಯೇಕ್ನ ಸೇನಾ ನೆಲೆ ಸಮೀಪದಲ್ಲಿನ ಮರುಭೂಮಿಯಲ್ಲಿರುವ ಪರ್ವತವೊಂದರ ಒಳಗೆ ಈ ಸ್ಥಾವರ ನಿರ್ಮಾಣವಾಗುತ್ತಿದೆ ಎಂದು ಮಾಧ್ಯಮ ವರದಿ ಹೇಳಿದೆ.