ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಹಿಂದೂ ಟೆಂಪಲ್ ಓಕೆ, ಮಸೀದಿ ಯಾಕೆ ಬೇಡ'?: ಬರಾಕ್ (Hindu temple | ground zero | mosque | Barack Obama | Quran)
Bookmark and Share Feedback Print
 
ಉಗ್ರರು ಎಸಗಿದ 9/11ರ ದಾಳಿಯಲ್ಲಿ ನಾಮಾವಶೇಷವಾದ ವಿಶ್ವ ವಾಣಿಜ್ಯ ಕೇಂದ್ರದ ನಿವೇಶನದ ವ್ಯಾಪ್ತಿಯಲ್ಲಿ (ಗ್ರೌಂಡ್ ಜೀರೋ) ಮಸೀದಿ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಹೇಳಿಕೆ ವ್ಯಕ್ತವಾಗುತ್ತಿರುವ ನಡುವೆಯೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತೆ ಬೆಂಬಲ ವ್ಯಕ್ತಪಡಿಸಿದ್ದು, ಅಮೆರಿಕ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆಯೇ ಹೊರತು ಇಸ್ಲಾಮ್ ವಿರುದ್ಧವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

'ಎಲ್ಲಾ ಪುರುಷರು ಮತ್ತು ಮಹಿಳೆಯರನ್ನು ಸಮಾನವಾಗಿ ಕಾಣಬೇಕು, ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಬೇಕಾಗಿದೆ. ಒಂದು ಧರ್ಮದವರು ಮುಕ್ತವಾಗಿ ಅವರ ಧರ್ಮವನ್ನು ಆಚರಿಸುವ ಹಕ್ಕನ್ನೂ ಕೂಡ ನೀಡಬೇಕಾಗಿದೆ' ಎಂದು ಶ್ವೇತಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬರಾಕ್ ವಿವರಿಸಿದ್ದಾರೆ.

ವಿವಾದಿತ ಗ್ರೌಂಡ್ ಜೀರೋ ಸ್ಥಳದಲ್ಲಿ ನೀವು ಚರ್ಚ್, ಯಹೂದ್ಯರ ಆರಾಧನ ಕೇಂದ್ರ, ಹಿಂದೂ ದೇವಾಲಯ ನಿರ್ಮಿಸಿಸುತ್ತೀರಿ ಎಂದಾದರೆ ಮಸೀದಿ ನಿರ್ಮಿಸಲು ಕೂಡ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

2001ರ ಸೆಪ್ಟಂಬರ್‌ 11ರಂದು ನಡೆಸಿದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಕುರಾನ್‌ ಪ್ರತಿಯನ್ನು ಸುಡಲು ಫ್ಲೋರಿಡಾ ಚರ್ಚ್‌ನ ಪಾದ್ರಿ ಟೆರ್ರಿ ಜೋನ್ಸ್‌ ಅವರ ಉದ್ದೇಶಿತ ಯೋಜನೆ ವಿರುದ್ಧ ಈಗಾಗಲೇ ಜಾಗತಿಕವಾಗಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಗ್ರೌಂಡ್ ಜೀರೋದಲ್ಲಿ ಮಸೀದಿ ನಿರ್ಮಿಸಲು ಇಸ್ಲಾಮಿಕ್ ಸೆಂಟರ್ ಮುಂದಾಗಬಾರದು ಎಂಬ ನೆಲೆಯಲ್ಲಿ ಕುರಾನ್ ಸುಡುವ ನಿರ್ಧಾರವನ್ನು ಫ್ಲೋರಿಡಾ ಚರ್ಚ್ ಕೈಬಿಟ್ಟಿರುವ ಹೇಳಿಕೆಯ ನಂತರ ಬರಾಕ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಆ ನಿಟ್ಟಿನಲ್ಲಿ 9/11ರ ದಾಳಿಯ ದುರಂತದಿಂದಾಗಿ ಈಗಲೂ ಮೃತ ಕುಟುಂಬಗಳು ನೋವು ಅನುಭವಿಸುತ್ತಿವೆ. ಸಾಕಷ್ಟು ಆಘಾತಕ್ಕೆಕ್ಕೊಳಗಾಗಿದ್ದರು. ಏನೇ ಇರಲಿ ಈ ಸೂಕ್ಷ್ಮ ವಿಚಾರವನ್ನು ಜನರು ಅರ್ಥ ಮಾಡಿಕೊಳ್ಳಬೇಕೆಂದು ನಾನು ಈ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದಿರುವ ಬರಾಕ್, ನಿಜವಾದ ಶತ್ರುಗಳು ಯಾರು ಎಂಬುದನ್ನು ನೆನಪಿಸಿಕೊಳ್ಳಿ. ನಾವು ಇಸ್ಲಾಮ್ ವಿರುದ್ಧ ಹೋರಾಡುತ್ತಿಲ್ಲ. ನಮ್ಮ ಹೋರಾಟ ಭಯೋತ್ಪಾದಕ ಸಂಘಟನೆ ವಿರುದ್ದ ಎಂದು ತಿಳಿಸಿದರು.

ಮುಸ್ಲಿಮ್ ವಿರೋಧಿ ಭಾವನೆ ಹೋಗಲಾಡಿಸಬೇಕಾಗಿದೆ. ನಿಜವಾದ ಶತ್ರುಗಳು ಯಾರು ಎಂಬುದನ್ನು ಅರಿತುಕೊಂಡು, ಸಮಾಜಕ್ಕೆ ಕಂಟಕವಾಗಿರುವ ಭಯೋತ್ಪಾದಕರ ವಿರುದ್ಧ ಪಾಶ್ಚಾತ್ಯ ಮತ್ತು ಇಸ್ಲಾಮ್ ರಾಷ್ಟ್ರಗಳು ಸಂಘಟಿತವಾಗಿ ಹೋರಾಟಬೇಕಾಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ