ಈಗ ಚಪ್ಪಲಿ ಎಸೆಯುವ ಗೀಳುರೋಗ ಬಹುತೇಕ ಸಾಮಾನ್ಯ ಎನ್ನುವಷ್ಟರಮಟ್ಟಿಗೆ ತಲುಪಿದೆ. ಹೌದು. ಇದೀಗ ಗ್ರೀಕ್ ಪ್ರಧಾನ ಮಂತ್ರಿ ಪ್ಯಾಪಂಡ್ರ್ಯೂ ಅವರ ಮೇಲೆ ಸಾಮಾನ್ಯ ನಾಗರಿಕನೊಬ್ಬ ಚಪ್ಪಲಿ ಎಸೆಯುವ ಮೂಲಕ ತನ್ನ ಪ್ರತಿಭಟನೆಯನ್ನು ತೋರಿದ್ದಾನೆ.
ಅಂತಾರಾಷ್ಟ್ರೀಯ ವಸ್ತುಪ್ರದರ್ಶನವೊಂದರಲ್ಲಿ ಭಾಗವಹಿಸಿದ್ದ ಪ್ರಧಾನಿಯವರ ಮೇಲೆ ಗುರಿಯಾಗಿಟ್ಟು ಚಪ್ಪಲಿ ಎಸೆದಾತನನ್ನು ಬಂಧಿಸಲಾಗಿದೆ. ಆದರೆ, ಗುರಿ ಸ್ಪಷ್ಟವಾಗಿತ್ತಾದರೂ, ಚಪ್ಪಲಿ ಕೊಂಚ ದೂರ ಹೋಗಿ ಬಿದ್ದಿದ್ದರಿಂದ ಚಪ್ಪಲಿ ದಾಳಿಯಿಂದ ಪ್ರಧಾನಿ ಪಾರಾಗಿದ್ದಾರೆ.
ಸರ್ಕಾರ ಕೈಗೊಂಡ ಕಾರ್ಮಿಕ ಸುಧಾರಣಾ ಕ್ರಮಗಳು ಹಾಗೂ ಹಣಕಾಸು ನಡವಳಿಗಳ ಮೇಲೆ ತನ್ನ ಅಸಂತೃಪ್ತಿ ತೋರಿಸಲು ತಾನು ಹೀಗೆ ಚಪ್ಪಲಿ ಎಸೆದು ಪ್ರತಿಭಟನೆ ತೋರಿದ್ದಾಗಿ ಆತ ವಿಚಾರಣೆ ವೇಳೆ ತಿಳಿಸಿದ್ದಾನೆ.