ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ರೀಲಂಕಾದಲ್ಲಿ ಲಷ್ಕರ್ ತರಬೇತಿ ಕೇಂದ್ರ ಇಲ್ಲ: ರಾಜಪಕ್ಸೆ (Sri Lanka | LeT terror | LTTE | Pune German bakery blast | Gotabhaya)
Bookmark and Share Feedback Print
 
ಕಳೆದ ವರ್ಷ ಮೇ ತಿಂಗಳಿನಲ್ಲಿ ಶ್ರೀಲಂಕಾ ಮಿಲಿಟರಿ ಪಡೆ ಎಲ್‌ಟಿಟಿಇ ವಿರುದ್ಧ ಅಂತಿಮ ಸಮರ ಸಾರಿ ಗೆಲುವು ಸಾಧಿಸಿದ ನಂತರ ದೇಶದ ನೆಲದಲ್ಲಿ ಯಾವುದೇ ಉಗ್ರಗಾಮಿ ಸಂಘಟನೆ ಕಾರ್ಯಾಚರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಶ್ರೀಲಂಕಾ, ಪುಣೆ ಜರ್ಮನ್ ಬೇಕರಿ ಸ್ಫೋಟದ ಶಂಕಿತ ಆರೋಪಿಗೆ ಲಷ್ಕರ್ ಇ ತೊಯ್ಬಾ ಕೊಲಂಬೊದಲ್ಲಿ ತರಬೇತಿ ನೀಡಿದೆ ಎಂಬ ವರದಿಯನ್ನು ತಳ್ಳಿಹಾಕಿದೆ.

ಲಂಕಾದ ನೆಲದಲ್ಲಿ ಉಗ್ರರಿಗೆ ಯಾವುದೇ ಅವಕಾಶವಿಲ್ಲ. ಅಲ್ಲದೇ ದ್ವೀಪ ರಾಷ್ಟ್ರದಲ್ಲಿ ಲಷ್ಕರ್ ಸೇರಿದಂತೆ ಯಾವುದೇ ಉಗ್ರಗಾಮಿ ಸಂಘಟನೆಯ ತರಬೇತಿ ಕೇಂದ್ರಗಳಿಲ್ಲ ಎಂದು ರಕ್ಷಣಾ ಕಾರ್ಯದರ್ಶಿ ಗೋಟಭಯಾ ರಾಜಪಕ್ಸೆ ಪ್ರತಿಕ್ರಿಯೆ ನೀಡಿದ್ದಾರೆ.

ಪುಣೆಯ ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ಸಹ ಆರೋಪಿ 29ರ ಹರೆಯದ ಮಿರ್ಜಾ ಹಿಮಾಯತ್ ಬೈಗ್ ಕೊಲಂಬೊದಲ್ಲಿ ಉಗ್ರರು ತರಬೇತಿ ನೀಡಿದ್ದರು ಎಂಬ ವರದಿಯ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

ಆ ನಿಟ್ಟಿನಲ್ಲಿ ಶ್ರೀಲಂಕಾ ನೆಲದಲ್ಲಿ ಉಗ್ರರಿಗೆ ಯಾವುದೇ ಅವಕಾಶವಿಲ್ಲ ಎಂದು ಗೋಟಭಯಾ ವಿವರಿಸಿದ್ದಾರೆ. ಎಲ್‌ಟಿಟಿಇ ಅಂತ್ಯದ ನಂತರ ಲಂಕಾ ಭಯೋತ್ಪಾದಕ ಮುಕ್ತ ರಾಷ್ಟ್ರವಾಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ