ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಶ್ಮೀರ ನಮ್ಮದೇ, ಒತ್ತಡ ಹಾಕಬೇಡಿ: ಅಮೆರಿಕಾಕ್ಕೆ ಪಾಕ್ (USA | Pakistan | India | Kashmir | Richard Haass)
Bookmark and Share Feedback Print
 
ಕಾಶ್ಮೀರ ನಮ್ಮದು, ಈ ವಿಚಾರದಲ್ಲಿ ನಮ್ಮನ್ನು ದೂರ ಹೋಗುವಂತೆ ಬಲವಂತ ಮಾಡಬೇಡಿ ಎಂದು ಜಮ್ಮು-ಕಾಶ್ಮೀರದ ನಿಯಂತ್ರಣ ರೇಖೆಯುದ್ದಕ್ಕೂ ನಡೆಯುತ್ತಿರುವ ನುಸುಳುವಿಕೆಯನ್ನು ಕೊನೆಗೊಳಿಸಿ ಎಂದು 2002ರಲ್ಲಿ ಸೂಚಿಸಿದ್ದ ಅಮೆರಿಕಾಕ್ಕೆ ಪಾಕಿಸ್ತಾನ ಹೇಳಿತ್ತು ಎಂದು ದಾಖಲೆಗಳು ಬಹಿರಂಗಪಡಿಸಿವೆ.

ಸೆಪ್ಟೆಂಬರ್ 11ರ ಭಯಾನಕ ಅಮೆರಿಕಾ ದಾಳಿಯ ವರ್ಷದ ನಂತರ ಅಮೆರಿಕಾ-ಪಾಕಿಸ್ತಾನಗಳ ನಡುವಿನ ಸಹಕಾರಗಳ ಕುರಿತು 2002ರ ಅಕ್ಟೋಬರ್ 31ರಂದು ಪಾಕಿಸ್ತಾನದ ಮಿಲಿಟರಿ ಅಧಿಕಾರಿ ಮತ್ತು ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ಅಧಿಕಾರಿ ರಿಚರ್ಡ್ ಹಾಸ್ ನಡೆಸಿದ ಮಾತುಕತೆ ಸಂದರ್ಭದಲ್ಲಿ ಈ ರೀತಿಯ ಮಾತುಗಳು ಬಂದಿವೆ.

ಕಾಶ್ಮೀರ ವಿಚಾರದ ಕುರಿತು ಮಾತನಾಡಿದ್ದ ಹಾಸ್, ಅಲ್ಲಿ ನಡೆಯುತ್ತಿರುವ ಒಳ ನುಸುಳುವಿಕೆಯನ್ನು ಪಾಕಿಸ್ತಾನ ಕೊನೆಗೊಳಿಸಬೇಕು ಎಂದು ಒತ್ತಿ ಹೇಳಿದ್ದರು. ಆದರೆ ಇದಕ್ಕೆ ಎಚ್ಚರಿಕೆ ರವಾನಿಸಿದ್ದ ಪಾಕ್ ಅಧಿಕಾರಿ, ಕಾಶ್ಮೀರ ವಿಚಾರದಲ್ಲಿ ನಮ್ಮನ್ನು ದೂರ ತಳ್ಳುವ ಯತ್ನಕ್ಕೆ ಅಮೆರಿಕಾ ಮುಂದಾಗಬಾರದು, ಅದು ನಮ್ಮ ಭೂಪ್ರದೇಶ ಎಂದು ಹೇಳಿದ್ದರು ಎಂದು ಬಹಿರಂಗವಾದ ರಹಸ್ಯ ದಾಖಲೆಯೊಂದರಿಂದ ತಿಳಿದು ಬಂದಿದೆ.

ಗಡಿ ಪ್ರದೇಶದಿಂದ ಸೇನೆಯನ್ನು ಹಿಂದಕ್ಕೆ ಪಡೆದುಕೊಳ್ಳುವ ಬಗ್ಗೆ ಭಾರತವು ಹೊರಡಿಸಿರುವ ಪ್ರಕಟಣೆ ತನಗೆ ಸಂತಸ ತಂದಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿನ ಸೇನೆಯನ್ನು ಅಫ್ಘಾನ್ ಗಡಿ ಪ್ರದೇಶಕ್ಕೆ ನಿಯೋಜನೆಗೊಳಿಸಿ, ಭಯೋತ್ಪಾದನೆಯ ವಿರುದ್ಧ ಹೋರಾಡಬಹುದಾಗಿದೆ ಎಂದು ಅಮೆರಿಕಾ ಅಧಿಕಾರಿಯು ಪಾಕ್ ಮಿಲಿಟರಿ ಅಧಿಕಾರಿಯ ಜತೆ ಮಾತುಕತೆ ನಡೆಸಿದ್ದರು.

ಪಾಕಿಸ್ತಾನವು ಒಳ ನುಸುಳುವಿಕೆಯನ್ನು ಮುಂದುವರಿಸುತ್ತಿದೆ. ಇದನ್ನು ನಿಲ್ಲಿಸುವುದರಿಂದ ಭಾರತ ಮತ್ತು ಅಮೆರಿಕಾಕ್ಕೆ ಸಹಕಾರವಾಗಲಿದೆ. ನುಸುಳುವಿಕೆಯು ಮುಂದುವರಿಯುವುದರಿಂದ ಪಾಕಿಸ್ತಾನಕ್ಕೆ ಮಿತ್ರರಾಷ್ಟ್ರಗಳ ಸಹಕಾರ ಸಿಗುವುದು ಕೂಡ ಕಷ್ಟವಾಗುತ್ತಿದೆ ಎಂಬ ಅಮೆರಿಕಾ ಅಭಿಪ್ರಾಯಕ್ಕೆ ತಿರುಗೇಟು ನೀಡಿದ್ದ ಪಾಕ್ ಅಧಿಕಾರಿ, ಕಾಶ್ಮೀರ ವಿಚಾರವು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಿರುವುದನ್ನು ಒಪ್ಪಿಕೊಂಡರೂ ನ್ಯಾಯವಾಗಿ ಆ ಭೂಪ್ರದೇಶ ನಮ್ಮದೇ ಎಂದು ವಾದಿಸಿದ್ದರು.

ಕಾಶ್ಮೀರ ನಮ್ಮ ಭೂಪ್ರದೇಶವಾಗಬೇಕು. ನಿಯಂತ್ರಣಾ ರೇಖೆಯನ್ನು ಅಂತಾರಾಷ್ಟ್ರೀಯ ಗಡಿ ಎಂದು ಒಪ್ಪಿಕೊಳ್ಳಲು ಪಾಕಿಸ್ತಾನದ ಜನತೆ ಸಿದ್ಧರಿಲ್ಲ ಎಂದು ಪಾಕಿಸ್ತಾನ ಹೇಳಿತ್ತು.
ಸಂಬಂಧಿತ ಮಾಹಿತಿ ಹುಡುಕಿ